ಬಾಗಲಕೋಟೆ: ದಡ್ಡನೇವರ ಮೈನ್ಸ್ ಕಂಪನಿಯ ಕಾರ್ಖಾನೆ ಬಳಿ ಇದ್ದ ನೇಕಾರರಿಗೆ ಪರ್ಯಾಯ ಸ್ಥಳದಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಲಾಗಿದೆ. ಆದರೆ ಇದುವರೆಗೂ ನಿವೇಶನ ನೀಡದೆ ಇರುವ ಹಿನ್ನೆಲೆಯಲ್ಲಿ ನೇಕಾರರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ: ದಡ್ಡನೇವರ ಮೈನ್ಸ್ ಕಂಪನಿಯ ವಿರುದ್ಧ ನೇಕಾರರ ಪ್ರತಿಭಟನೆ - Bagalkote
ಬಾಗಲಕೋಟೆಯ ದಡ್ಡನೇವರ ಮೈನ್ಸ್ ಕಂಪನಿಯ ಕಾರ್ಖಾನೆ ಬಳಿ ಇದ್ದ ನೇಕಾರರಿಗೆ ಇದುವರೆಗೂ ನಿವೇಶನ ನೀಡದೆ ಇರುವ ಹಿನ್ನೆಲೆಯಲ್ಲಿ ನೇಕಾರರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನೇಕಾರರ ಪ್ರತಿಭಟನೆ
ಜಿಲ್ಲೆಯ ಕಮತಗಿ ಗ್ರಾಮದ ಬಳಿರುವ ಮೈನ್ಸ್ ಕಂಪನಿಯ ಕಾರ್ಖಾನೆ ಹತ್ತಿರವೇ ಸುಮಾರು 40 ಕುಟುಂಬಗಳು ವಾಸ ಮಾಡುವುದಕ್ಕೆ ಸರ್ಕಾರ ನಿವೇಶನ ಗುರುತಿಸಿ, ಆಶ್ರಯ ಮನೆಯ ಮಾದರಿಯಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದವು. ಆದರೆ ಮೈನ್ಸ್ ಕಂಪನಿಯವರು, ಹಣದ ಆಮಿಷ ತೋರಿಸಿ 12 ವರ್ಷಗಳ ಕಾಲ ಲೀಸ್ ಪಡೆದುಕೊಂಡು, ಪರ್ಯಾಯ ಸ್ಥಳ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈಗ ಹನ್ನೆರಡು ವರ್ಷ ಕಳೆದರೂ ಕೂಡ ನಿವೇಶನ ಗುರುತಿಸಿಲ್ಲ ಮತ್ತು ಯಾವುದೇ ಪರಿಹಾರ ಮಾರ್ಗ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಗಮನಹರಿಸಿ ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.