ಬಾಗಲಕೋಟೆ:ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ವರ್ಷಗಳಿಂದ ಬತ್ತಿ ಹೋಗಿದ್ದ ಬೋರ್ವೆಲ್ಗಳಲ್ಲಿ ಜೀವಜಲ ಧುಮ್ಮಿಕ್ಕುತ್ತಿದೆ.
ಬತ್ತಿದ ಕೊಳವೆ ಬಾವಿಗಳಿಗೆ ಮರುಜೀವ: ರೈತರ ಮೊಗದಲ್ಲಿ ಸಂತಸ - bagalkot latest news
ಇಳಕಲ್ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದ ಮುದಿಯಪ್ಪ ಭಜಂತ್ರಿಯವರ ಹೊಲದಲ್ಲಿ ಹಲವು ವರ್ಷಗಳಿಂದ ಬತ್ತಿ ಹೋಗಿದ್ದ ಬೋರ್ವೆಲ್ನಲ್ಲಿ ನಿರಂತರ ಮಳೆಗೆ ನೀರು ಧುಮ್ಮುಕ್ಕಿ ಹರಿಯುತ್ತಿದ್ದು, ದೃಶ್ಯ ನೋಡಲು ಸಾಕಷ್ಟು ಜನರು ಬರುತ್ತಿದ್ದಾರೆ.
ಜಿಲ್ಲೆಯ ಇಳಕಲ್ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದ ಮುದಿಯಪ್ಪ ಭಜಂತ್ರಿಯವರ ಹೊಲದಲ್ಲಿ ಹಲವು ವರ್ಷಗಳಿಂದ ಬತ್ತಿ ಹೋಗಿದ್ದ ಬೋರ್ವೆಲ್ನಲ್ಲಿ ನಿರಂತರ ಮಳೆಗೆ ನೀರು ಧುಮ್ಮುಕ್ಕಿ ಹರಿಯುತ್ತಿದ್ದು, ದೃಶ್ಯ ನೋಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರುಪಯುಕ್ತವಾಗಿದ್ದ ಬೀಳಗಿ ತಾಲೂಕಿನ ರನಕವಿ ನಗರದ ಬ್ರಹ್ಮಾನಂದ ಅವರ ಮನೆಯಲ್ಲಿನ ಕೊಳವೆ ಬಾವಿಯಲ್ಲೂ ಕೂಡ ನೀರು ಇದ್ದಕ್ಕಿದ್ದಂತೆ ಚಿಮ್ಮಲಾರಂಭಿಸಿದೆ.
ಚಿಮ್ಮಡ ಗ್ರಾಮದಲ್ಲಿಯೂ ಕೂಡ ಕೊಳವೆ ಬಾವಿಗಳಿಂದ ನೀರು ಉಕ್ಕಿ ಹರಿಯುತ್ತಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.