ಕರ್ನಾಟಕ

karnataka

ETV Bharat / state

ಜಮಖಂಡಿ: ಅನಾಥ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಯುವಕ! - Bagalkot District News

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಹಿಂದೂ ಕಾರ್ಯಕರ್ತ ಶೈಲೇಶ್​ ಎಂಬ ಯುವಕ ಇಂದು ಮೃತಪಟ್ಟ ಅನಾಥ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.

ಮೃತ ಅನಾಥ ವೃದ್ಧೆಯ ಅಂತ್ಯ ಸಂಸ್ಕಾರ

By

Published : Aug 19, 2020, 1:33 PM IST

ಬಾಗಲಕೋಟೆ:ಮೃತಪಟ್ಟ ಅನಾಥ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಯುವಕನೊಬ್ಬ ಜಮಖಂಡಿ ಪಟ್ಟಣದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾನೆ.

ಶೈಲೇಶ್​​ ಆಪ್ಟೆ ಎಂಬ ಯುವಕ ಲಾಕ್​ಡೌನ್ ಸಮಯದಲ್ಲಿ ವೃದ್ಧೆ ವಿಜಯಾ ಯಾದವಾಡ (78) ಅವರಿಗೆ ಆಹಾರ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದ. ಅಂದಿನಿಂದ ಈ ವೃದ್ಧೆಗೆ ಸಹಾಯ ಹಸ್ತ ಚಾಚುತ್ತಾ ಬಂದಿದ್ದ.

ಲಾಕ್​ಡೌನ್​​ನಲ್ಲಿ ಆಹಾರ ಪದಾರ್ಥ ವಿತರಿಸುವಾಗ ಹಿಂದೂ ಕಾರ್ಯಕರ್ತ ಶೈಲೇಶ್​​ ಆಪ್ಟೆಯೊಂದಿಗೆ ವೃದ್ಧೆ ತನ್ನ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದ ವೃದ್ಧೆಗೆ ಔಷಧ ಮತ್ತು ಊಟದ ಖರ್ಚನ್ನು ಮೂರು ತಿಂಗಳ ಕಾಲ ಶೈಲೇಶ್​​ ಅವರೇ ಭರಿಸಿದ್ದರು.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ವಿಜಯಾ ಅನಾರೋಗ್ಯದಿಂದ ಮೃತಪಟ್ಟರು. ಅವರಿಗೆ ಬಂಧು-ಬಳಗ ಇಲ್ಲದ ಹಿನ್ನೆಲೆ ಈ ಯುವಕನೇ ಹೆಗಲು ಕೊಟ್ಟು ಅಂತ್ಯಕ್ರಿಯೆ ವೆಚ್ಚ ಭರಿಸಿ ಅಂತಿಮ ವಿಧಿ ವಿಧಾನ ಪೂರೈಸಿದ್ದಾನೆ.

ABOUT THE AUTHOR

...view details