ಕರ್ನಾಟಕ

karnataka

ETV Bharat / state

ಕಬ್ಬನ ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆ ಮಾಲೀಕರು.. ರೈತರಿಂದ ಆಕ್ರೋಶ - ಸಕ್ಕರೆ ಕಾರ್ಖಾನೆಗಳ ಮಾಲೀಕರು

ರೈತರ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳ ಪೈಕಿ 11 ಕಾರ್ಖಾನೆಗಳ ಮಾಲೀಕರ ಸಭೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಿತು. ಅಲ್ಲದೇ ಅಕ್ಟೋಬರ್ 25 ರ ಒಳಗಾಗಿ ಎಲ್ಲ ಬಾಕಿ ಚುಕ್ತಾ ಮಾಡುವಂತೆಯೂ ಹಾಗೂ ಸಂದಾಯ ಮಾಡದಿದ್ರೆ ಕಠಿಣ ಕ್ರಮ ಕೈಗೊಳ್ಳೊದಾಗಿ ಎಚ್ವರಿಕೆ ನೀಡಿದ್ದಾರೆ..

Bagalkote news
ಕಬ್ಬನ ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆ ಮಾಲೀಕರು: ರೈತರಿಂದ ಆಕ್ರೋಶ

By

Published : Oct 26, 2020, 9:15 PM IST

ಬಾಗಲಕೋಟೆ:ಸಕ್ಕರೆ ನಾಡು, ಪ್ರವಾಹದ ಬೀಡಾಗುತ್ತಿರುವ ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಗೋಳು ಕೇಳತೀರದು. ಜಿಲ್ಲೆ ಪ್ರತಿವರ್ಷ ಭೀಕರ ಪ್ರವಾಹಕ್ಕೆ ಒಳಗಾಗುತ್ತಲೇ ಇದ್ದು, ಈ ಭಾಗದ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ರೈತರು ಹಂಗೋ ಹಿಂಗೋ ಮಾಡಿ ಬೆಳೆ ತೆಗಿತಾರೆ. ಜಿಲ್ಲೆಯಲ್ಲಿ ಒಟ್ಟು 12 ಕಾರ್ಖಾನೆಗಳು ಚಾಲ್ತಿಯಲ್ಲಿ ಇರುವುದರಿಂದ, ಇವುಗಳನ್ನೇ ನಂಬಿಕೊಂಡು ಸಾವಿರಾರು ಜನ ರೈತರು ಕಬ್ಬು ಬೆಳೆಯುತ್ತಾರೆ. ಪ್ರವಾಹದಂತಹ ಸಂಕಷ್ಟದ ಸಮಯದಲ್ಲೂ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸುವ ರೈತರಿಗೆ ಮಾತ್ರ ಬಾಕಿ ಹಣ ಸಂದಾಯ ಆಗ್ತಿಲ್ಲ. ಅದರಲ್ಲೂ ಜನಪ್ರತಿನಿಧಿಗಳೇ ರೈತರ ಬಾಕಿ ಹಣ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಅನ್ನೋದು ಮತ್ತೊಂದು ದುರಂತ.

ಕಬ್ಬನ ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆ ಮಾಲೀಕರು: ರೈತರಿಂದ ಆಕ್ರೋಶ

ಹೀಗಾಗಿ ರೈತರ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳ ಪೈಕಿ 11 ಕಾರ್ಖಾನೆಗಳ ಮಾಲೀಕರ ಸಭೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಿತು. ಅಲ್ಲದೇ ಅಕ್ಟೋಬರ್ 25 ರ ಒಳಗಾಗಿ ಎಲ್ಲ ಬಾಕಿ ಚುಕ್ತಾ ಮಾಡುವಂತೆಯೂ ಹಾಗೂ ಸಂದಾಯ ಮಾಡದಿದ್ರೆ ಕಠಿಣ ಕ್ರಮ ಕೈಗೊಳ್ಳೊದಾಗಿ ಎಚ್ವರಿಕೆ ನೀಡಿದ್ದಾರೆ.

ಇನ್ನು, ಪ್ರವಾಹದ ವೇಳೆಯಲ್ಲಿ ರೈತರ ಕೈ ಹಿಡಿಯಬೇಕಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು ಕೈ ಕೊಟ್ಟಿದ್ದು, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಬಾಕಿ ಹಣವನ್ನು ಶೀಘ್ರವೇ ಕೊಡಿಸಬೇಕು ಅಂತಾ ರೈತರು ಆಗ್ರಹಿಸಿದ್ದಾರೆ. ಮಾಜಿ ಸಚಿವ ಮುರಗೇಶ ನಿರಾಣಿ ಅವರು, ಹೊಸ ಹೊಸ ಕಾರ್ಖಾನೆ ಚಾಲನೆ ನೀಡುತ್ತಾ ಇದ್ದಾರೆ. ಆದ್ರೆ, ರೈತರ ಬಾಕಿ ಹಣ ಕೊಡಲು ಯಾಕೆ ಹಿಂಜರಿಯುತ್ತಿದ್ದಾರೆ ಅಂತಾ ರೈತರು ಪ್ರಶ್ನೆ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿರುವ ಜನಪ್ರತಿನಿಧಿಗಳ ಒಡೆತನ ಸಕ್ಕರೆ ಕಾರ್ಖಾನೆಗಳು ಸಮಯಕ್ಕೆ ಸರಿಯಾಗಿ ಕಬ್ಬಿನ ಬಾಕಿ‌ ನೀಡ್ತಿಲ್ಲ. ಮಾಜಿ ಸಚಿವ ಹಾಲಿ ಶಾಸಕ ಮುರುಗೇಶ್ ನಿರಾಣಿಯವರ ಒಡೆತನದ ನಿರಾಣಿ ಶುಗರ್ಸ್‍ ನಿಂದ 2019-20 ರ ಎಫ್ ಆರ್ ಪಿ ದರ 4.18 ಕೋಟಿ ಬಾಕಿಯಿದ್ದು, ಒಂದು ವಾರದಲ್ಲಿ ಪಾವತಿಸುವಂತೆ ಕಾರ್ಖಾನೆಯ ಮಾಲೀಕರಿಗೆ ಡಿಸಿ ನಿರ್ದೇಶನ ನೀಡಿದ್ದಾರೆ.

ಕಾರ್ಖಾನೆ ಆಡಳಿಮಂಡಳಿಯವರ ಜೊತೆ ನಡೆದ ಸಭೆಯಲ್ಲಿ ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಈ ನಿರ್ದೇಶನ ನೀಡಿದ್ದಾರೆ. ಮತ್ತೊಂದೆಡೆ 2019-20 ನೇ ಸಾಲಿನ ಹೆಚ್ಚುವರಿ ಬಾಕಿ ಹಣವನ್ನೂ ನೀಡದ ಜನಪ್ರತಿನಿಧಿಗಳು ಹಾಗೂ ಕಾರ್ಖಾನೆ ಮಾಲೀಕರು ಹೆಚ್ಚುವರಿ ದರ ಬಾಕಿಯನ್ನು ಅಕ್ಟೋಬರ್ 25 ರೊಳಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

ಇತ್ತ ಪರಿಷತ್ ಪ್ರತಿಪಕ್ಷನಾಯಕ ಎಸ್.ಆರ್ ಪಾಟೀಲ್ ಅವರಿಗೆ ಸೇರಿದ ಬೀಳಗಿ ಸುಗರ್ಸ್ 17.69 ಕೋಟಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರ ಜಮಖಂಡಿ ಶುಗರ್ಸ್ ನಿಂದ 10.18 ಕೋಟಿ, ಮಾಜಿ ಸಚಿವ ಹಾಲಿ ಶಾಸಕ ಮುರುಗೇಶ್ ನಿರಾಣಿ ಅವರ ನಿರಾಣಿ ಶುಗರ್ಸ್ ನಿಂದ 24.28 ಕೋಟಿ, ನಿರಾಣಿ ಸಹೋದರ ಸಂಗಮೇಶ್ ನಿರಾಣಿಯವರ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಿಂದ 10.97 ಕೋಟಿ, ಕುಂದರಗಿಯ ಜೆಮ್ ಶುಗರ್ಸ್ 10.46 ಕೋಟಿ, ಉತ್ತೂರಿನ ಇಂಡಿಯನ್ ಕೇನ್ ಪವರ್ ಲಿ. 21.40 ಕೋಟಿ, ಸಿದ್ದಾಪೂರದ ಪ್ರಭುಲಿಂಗೇಶ್ವರ ಶುಗರ್ಸ್ 18.10 ಕೋಟಿ, ರನ್ನನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 5.32 ಕೋಟಿ ಹೀಗೆ ಒಟ್ಟು 118.41 ಕೋಟಿ ರೂ.ಗಳ ಬಾಕಿ ಹಣ ಉಳಿಸಿಕೊಂಡಿವೆ.

ಇನ್ನು, ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರಾದ‌ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸಾಧ್ಯವಾದಷ್ಟು ಬಾಕಿ ಹಣ ತಿರಿಸುವ ಪ್ರಯತ್ನ ಮಾಡೋದಾಗಿ ಹೇಳಿದ್ರೆ, ಸಕ್ಕರೆ ಕಾರ್ಖಾನೆ ಮಾಲೀಕ ಹಾಗೂ ಬೀಳಗಿ ಕ್ಷೇತ್ರದ ಶಾಸಕ ಮುರಗೇಶ ನಿರಾಣಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸರಿಯಾದ ಸ್ಪಂದನೆ ಮಾಡುತ್ತಿಲ್ಲ ಎಂಬ ಆರೋಪಗಳು ಇವೆ.

ಮೊದಲೇ ಭೀಕರ ಪ್ರವಾಹದಿಂದ ಬಾಗಲಕೋಟೆ ರೈತರು ತತ್ತರಿಸಿ ಹೋಗಿದ್ದಾರೆ. ಇಂಥದ್ರಲ್ಲಿ ರೈತರ ಕೈ ಹಿಡಿಯಬೇಕಿದ್ದ ಜನಪ್ರತಿನಿಧಿಗಳು ಕಬ್ಬಿನ ಬಾಕಿ ಹಣ ನೀಡದೆ ಸತಾಯಿಸ್ತಿದ್ದಾರೆ. ಸರ್ಕಾರ ಕಬ್ಬು ಬೆಳೆಗಾರರ ಬಾಕಿ ಹಣ ನೀಡುಸುವಲ್ಲಿ ಕಠಿಣ ಕ್ರಮ ಕೈಗೊಂಡು ಕಬ್ಬು ಬೆಳೆಗಾರರು ಬೀದಿಪಾಲಾಗದಂತೆ ನೋಡಿಕೊಳ್ಳಬೇಕಿದೆ.

ABOUT THE AUTHOR

...view details