ಕರ್ನಾಟಕ

karnataka

ETV Bharat / state

ನವನೀತ ಚೋರನ ಜನ್ಮಾಷ್ಟಮಿ ಸಂಭ್ರಮ.. ಮಧ್ಯರಾತ್ರಿಯಲ್ಲಿಯೂ ಭಕ್ತರ ಉತ್ಸಾಹ.. - ಅಖಿಲ ಭಾರತ ಮಾಧ್ವ ಮಹಾ ಮಂಡಳ

ನವನೀತ ಚೋರ, ಮುದ್ದು ಗೋಪಾಲ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನವನಗರದ ಶ್ರೀ ಕೃಷ್ಣ ಮಠದಲ್ಲಿ ಮುಗಿಲು ಮುಟ್ಟಿದ ಸಂಭ್ರಮವಿತ್ತು. ಅಲ್ಲದೇ ನೂರಾರು ಭಕ್ತರಿಂದ ಸಾಮೂಹಿಕ ಅರ್ಘ್ಯ ಪ್ರದಾನ ಹಾಗೂ ಬೆಣ್ಣೆಯ ನೈವೇದ್ಯ ಸಮರ್ಪಣೆ ಮಾಡಲಾಯಿತು.

ಮಕ್ಕಳ ವೇಷಭೂಷಣ

By

Published : Aug 25, 2019, 7:54 AM IST

ಬಾಗಲಕೋಟೆ :ನವನೀತ ಚೋರ, ಮುದ್ದು ಗೋಪಾಲ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನವನಗರದ ಶ್ರೀ ಕೃಷ್ಣ ಮಠದಲ್ಲಿ ಮುಗಿಲು ಮುಟ್ಟಿದ ಸಂಭ್ರಮವಿತ್ತು. ಅಲ್ಲದೇ ನೂರಾರು ಭಕ್ತರಿಂದ ಸಾಮೂಹಿಕ ಅರ್ಘ್ಯ ಪ್ರದಾನ ಹಾಗೂ ಬೆಣ್ಣೆಯ ನೈವೇದ್ಯ ಸಮರ್ಪಣೆ ಮಾಡಲಾಯಿತು.

ನವನೀತ ಚೋರನ ಜನ್ಮಾಷ್ಟಮಿ ಸಂಭ್ರಮ..
ನವನಗರದ 8ನೇ ಕ್ರಾಸ್​ನಲ್ಲಿರುವ ಅಖಿಲ ಭಾರತ ಮಾಧ್ವ ಮಹಾ ಮಂಡಳದ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ ವಾತಾವರಣ ಇತ್ತು. ಮಧ್ಯರಾತ್ರಿಯಲ್ಲಿಯೂ ನೂರಾರು ಸಂಖ್ಯೆಯ ಭಕ್ತರು ನೆರೆದಿದ್ದರು. ಹಾಗೆಯೇ ವಿಶೇಷವಾಗಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಜಯತೀರ್ಥ ತಾಸಗಾಂವ ಅವರ ದಾಸವಾಣಿ ಕಾರ್ಯಕ್ರಮ ಆರಂಭವಾಗಿ ರಾತ್ರಿ 11 ಗಂಟೆಯವರೆಗೆ ಜರುಗಿ ಶೋತೃಗಳು ಭಕ್ತಿ ಭಾವದಲ್ಲಿ ತೇಲಿದರು.ನಂತರ ಶ್ರೀ ಪ್ರಶಾಂತ ಭಾರ್ಗವಾಚಾರ್ಯ ಅವರು ಶ್ರೀ ಕೃಷ್ಣನಿಗೆ ವೈಭವದ ಪೂಜೆ ನೆರವೇರಿಸಿದ ನಂತರ ಪಂ. ನವೀನಾಚಾರ್ಯ ಹಾಗೂ ಪಂ.ಪ್ರಮೋದಾಚಾರ್ಯ ಆಲೂರ ಅವರ ನೇತೃತ್ವದಲ್ಲಿ ಅರ್ಘ್ಯ ಪ್ರದಾನ ಮಾಡಲಾಯಿತು. ಸರತಿಯಲ್ಲಿ ನಿಂತು ಭಕ್ತರು ಶ್ರೀ ಕೃಷ್ಣನ ಉತ್ಸವ ಮೂರ್ತಿಗೆ ನೀರು ಹಾಗೂ ಹಾಲಿನಿಂದ ಅರ್ಘ್ಯ ಪ್ರದಾನ ಮಾಡಿದರು. ಶನಿವಾರ ಕೂಡ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಮಕ್ಕಳ ಛಧ್ಮ ವೇಷ ಸ್ಪರ್ಧೆ ವಿಶೇಷವಾಗಿ ನಡೆಯಿತು.


ಶ್ರೀ ರಾಧಾಕೃಷ್ಣ ಮಂದಿರ, ವಿದ್ಯಾಗಿರಿ ಕ್ರಾಸ್‌ನಲ್ಲಿರುವ ಬಾಲಾಜಿ ಮಂದಿರ, ಕಿಲ್ಲೆಯಲ್ಲಿರುವ ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿಯೂ ಕೂಡ ಜನ್ಮಾಷ್ಟಮಿ ಸಂಭ್ರಮ ನಡೆಯಿತು. ನವನಗರದ ಸೇವಾದಳದ ಶ್ರೀ ರುಕ್ಮೀಣಿಬಾಯಿ ಛಬ್ಬಿ ಪ್ರಾಥಮಿಕ, ಪೂರ್ವ ಪ್ರಾಥಮಿಕ ಮಕ್ಕಳ ವೇಷಭೂಷಣ ಗಮನ ಸೆಳೆಯಿತು.

ABOUT THE AUTHOR

...view details