ಬಾಗಲಕೋಟೆ :ನಾಡಹಬ್ಬ ದಸರಾ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಾಲಕರ ಪಥ ಸಂಚಲನ ನಡೆಸಲಾಯಿತು.
ದಸರಾ ಹಿನ್ನೆಲೆ: ಕಣ್ಮನ ಸೆಳೆದ ಆರ್ಎಸ್ಎಸ್ ಪಥ ಸಂಚಲನ - ಮಹಾನ್ ನಾಯಕರ ಭಾವಚಿತ್ರ
ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ, ದೇಶದ ಮಹಾನ್ ನಾಯಕರ ಭಾವಚಿತ್ರಗಳನಿಟ್ಟು ಪುಷ್ಪಗಳಿಂದ ಅಲಂಕಾರ ಮಾಡಿದ್ದರು. ಹಾಗೆಯೇ ಸ್ವಯಂ ಸೇವಕರ ವೇಷದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಾಲಕರಿಗೆ, ಪುಷ್ಪವನ್ನು ಚೆಲ್ಲಿ ಸ್ವಾಗತಿಸಲಾಯಿತು.
ಪಥ ಸಂಚಲನ
ಚಿಕ್ಕ ಬಾಲಕರು ಆರ್ಎಸ್ಎಸ್ನ ಉಡುಪು ಧರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ನಗರದ ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆಯು, ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಇನ್ನು ಸ್ಥಳೀಯರು ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ, ದೇಶದ ಮಹಾನ್ ನಾಯಕರ ಭಾವಚಿತ್ರಗಳನಿಟ್ಟು ಪುಷ್ಪಗಳಿಂದ ಅಲಂಕಾರ ಮಾಡಿದ್ದರು. ಹಾಗೆಯೇ ಸ್ವಯಂ ಸೇವಕರ ವೇಷದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಾಲಕರಿಗೆ, ಪುಷ್ಪವನ್ನು ಚೆಲ್ಲಿ ಸ್ವಾಗತಿಸಲಾಯಿತು.