ಬಾಗಲಕೋಟೆ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ನೇಕಾರರ ಸಾಲಮನ್ನಾ ಯೋಜನೆ ಘೋಷಿಸಿದ್ದು ಸಂತಸ ತಂದಿದೆ ಎಂದು ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನೇಕಾರರ ಸಂಪೂರ್ಣ ಸಾಲಮನ್ನಾ ಅಗತ್ಯ: ಶಿವಶಂಕರ ಶ್ರೀ ಅಭಿಮತ - Meeting of weavers in Bagalkot
ಸಿಎಂ ಯಡಿಯೂರಪ್ಪನವರು ನೇಕಾರರ ಸಾಲಮನ್ನಾ ಘೋಷಿಸಿರವುದು ಸ್ವಾಗತಾರ್ಹ ಎಂದು ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಹೇಳಿದರು.
ರಬಕವಿ-ಬನಹಟ್ಟಿ ನಗರದ ಹಿರೇಮಠದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ಸಭೆಯಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, 100 ಕೋಟಿ ರೂಗಳನ್ನು ಈ ಯೋಜನೆಗೆ ನೀಡಿರುವುದು ಸ್ವಾಗತಾರ್ಹ.ನೇಕಾರರ ಒಟ್ಟು ಸಾಲ 241 ಕೋಟಿ ರೂಗಳಷ್ಟು ಮಾತ್ರ ಇದೆ. ಈಗ ಅರ್ಧದಷ್ಟು ಸಾಲಮನ್ನಾ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಇನ್ನೂ 141 ಕೋಟಿ ರೂಗಳಷ್ಟು ಸಾಲಮನ್ನಾ ಮಾಡಿದಲ್ಲಿ ತುಂಬಾ ಅನುಕೂಲವಾಗುತ್ತದೆ. ಇದರಿಂದ ರಾಜ್ಯದ ಎಲ್ಲ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿದಂತಾಗುವುದು ಎಂದರು ಹೇಳಿದರು.
ಸಭೆಯಲ್ಲಿ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವನಿಂಗ ಟಿರಕಿ, ಸದಾಶಿವ ತಟಕೋಟ, ತಮ್ಮಣ್ಣಿ ಸಿದ್ದಪ್ಪನ್ನವರ, ಸಂಗಪ್ಪ ಉದಗಟ್ಟಿ, ಅನಿಲ ಟಿರಕಿ, ಲಕ್ಕಪ್ಪ ಪವಾರ, ಶ್ರೀಶೈಲ ಕೊಪ್ಪದ, ಉದಯ ಕುಲಗೋಡ, ಆನಂದ ಬಾಣಕಾರ, ಸದಾಶಿವ ಸಾರವಾಡ ಹಾಜರಿದ್ದರು.