ಬಾಗಲಕೋಟೆ:ಇಳಕಲ್ಲ ತಾಲೂಕಿನ ಗುಡೂರ ಗ್ರಾಮದ ಅರಸಿಬಿಡಿ ಕೆರೆಯಲ್ಲಿ ನರೇಗಾ ಕಾಮಗಾರಿಯ ಕೆರೆ ಹೂಳೆತ್ತುವ ಮಣ್ಣನ್ನು ಅಕ್ರಮವಾಗಿ ಇಟ್ಟಿಗೆ ತಯಾರಿಕೆ ಘಟಕಗಳಿಗೆ ರವಾನಿಸಲಾಗುತ್ತಿದೆ ಎಂದು ರೈತ ಸಂಘಟನೆಯವರು ದಾಳಿ ನಡೆಸಿದ್ದಾರೆ.
ರೈತರ ಹೊಲ ಸೇರಬೇಕಿದ್ದ ಕೆರೆ ಮಣ್ಣು ಇಟ್ಟಿಗೆ ತಯಾರಿಕೆಗೆ ಸಾಗಣೆ - bagalkot latest news
ಬಾಗಲಕೋಟೆಯ ಇಳಕಲ್ಲ ತಾಲೂಕಿನ ಗ್ರಾಮವೊಂದರಲ್ಲಿ ಕೆರೆ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ರಾಜಾರೋಷವಾಗಿ ಇಟ್ಟಿಗೆ ತಯಾರಿಕಾ ಘಟಕಗಳಿಗೆ ಸಾಗಣೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ರೈತರ ಹೊಲ ಸೇರಬೇಕಾದ ಮಣ್ಣು ಹೋಗಿದ್ದು ಇಟ್ಟಿಕೆ ತಯಾರಿಕೆಗೆ
ಟ್ರ್ಯಾಕ್ಟರ್ ಮೂಲಕ ಕೆರೆ ಮಣ್ಣನ್ನು ರಾಜಾರೋಷವಾಗಿ ಇಟ್ಟಿಗೆ ತಯಾರಿಕೆಗೆ ತೆಗೆದುಕೊಂಡು ಹೋಗುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮದ ರೈತ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಆಕ್ರಮವಾಗಿ ಮಣ್ಣು ತೆಗೆದು ಕೊಂಡು ಹೂಗುತ್ತಿರುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಇಟ್ಟಿಗೆ ತಯಾರಿಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕೊಲಿ ಕಾರ್ಮಿಕರಿಂದ ಟ್ರ್ಯಾಕ್ಟರ್ಗೆ ಮಣ್ಣು ತುಂಬಿಸಿ ಕಳುಹಿಸುತ್ತಿದ್ದಾರೆ ಎಂದು ರೈತ ಮುಖಂಡ ಮಲ್ಲಕಾಜು೯ನ ತಿಲಗರ ಆರೋಪಿಸಿದ್ದಾರೆ.