ಬಾಗಲಕೋಟೆ :ಅನೈತಿಕ ಸಂಬಂಧ ಸಂಶಯ ಹಿನ್ನೆಲೆ ಗರ್ಭಿಣಿ ಪತ್ನಿಗೆ ಚಾಕು ಇರಿದು ಪತಿಯೇ ಕೊಲೆಗೈದ ಘಟನೆ ಜಿಲ್ಲೆಯ ಬಾದಾಮಿ ಪಟ್ಟಣದ ರಂಗನಾಥ ನಗರದಲ್ಲಿ ನಡೆದಿದೆ.
ಅನೈತಿಕ ಸಂಬಂಧ ಶಂಕೆ.. ಗರ್ಭಿಣಿ ಹೆಂಡತಿ ಕೊಲೈಗೈದ ಪಾಪಿ ಗಂಡ - ಗರ್ಭಿಣಿ ಕೊಲೆ
ಮಂಜುಳಾ ಪತಿ ಸಂದೀಪ ಬಣಪಟ್ಟಿ ಕೊಲೆಗೈದು, ನಂತರ ತಲೆಗೆ ಕಲ್ಲು ಹೊಡೆದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾನೆ..
ಗರ್ಭಿಣಿ ಹೆಂಡತಿ ಕೊಲೆ
24 ವರ್ಷದ ಮಂಜುಳಾ ಸಂದೀಪ ಬಣಪಟ್ಟಿ ಕೊಲೆಯಾದ ಗರ್ಭಿಣಿ. ಮಂಜುಳಾ ಪತಿ ಸಂದೀಪ ಬಣಪಟ್ಟಿ ಕೊಲೆಗೈದು, ನಂತರ ತಲೆಗೆ ಕಲ್ಲು ಹೊಡೆದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾನೆ.
ಸದ್ಯ ಗಾಯಗೊಂಡಿದ್ದ ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.