ಕರ್ನಾಟಕ

karnataka

ಅಭಿವೃದ್ಧಿಪಡಿಸಿದ ತಳಿಗಳು ರೈತರಿಗೆ ತಲುಪಲಿ: ಸಂಸದ ಗದ್ದಿಗೌಡರ

By

Published : Jan 4, 2021, 8:36 PM IST

80 ಗ್ರಾಂ ಹಣ್ಣು ಹಂಪಲು, 75-105 ಗ್ರಾಂ ವಿವಿಧ ಸೊಪ್ಪು ಹಾಗೂ 85 ಗ್ರಾಂನಷ್ಟು ಇತರೆ ತರಕಾರಿ ಸೇವಿಸಬೇಕು. ಆಹಾರವೇ ಔಷಧಿಯಾಗಬೇಕೇ ಹೊರತು ಔಷಧ ಆಹಾರವಾಗಬಾರದು ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Horticulture fair closing ceremony in Bagalkote district
ಸಂಸದ ಗದ್ದಿಗೌಡರ

ಬಾಗಲಕೋಟೆ:ಅಭಿವೃದ್ಧಿಪಡಿಸಿದ ವಿವಿಧ ತಳಿಗಳನ್ನು ರೈತರ ಜಮೀನಿಗೆ ತಲುಪಿಸಿ ಆರ್ಥಿಕವಾಗಿ ಸದೃಢವಾಗುವಂತೆ ಮಾಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಸಲಹೆ ನೀಡಿದರು.

ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 'ತೋಟಗಾರಿಕೆ ಮೇಳ'ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳು ಭೂಮಿಯ ಗುಣಧರ್ಮಕ್ಕೆ ತಕ್ಕಂತ ಬೆಳೆಗಳ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳಬೇಕಿದೆ. ಈ ಮೂಲಕ ಅನ್ನದಾತರು ಆರ್ಥಿಕಾಭಿವೃದ್ಧಿ ಸಾಧಿಸಲು ಸಹಾಯವಾಗಲಿದೆ ಎಂದರು.

ಇದನ್ನೂ ಓದಿ...ಅನಿವಾಸಿ ಕನ್ನಡಿಗರ 'ಎನ್ಆರೈ ಅಪೀಲ್ ಡೇ' ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ

ವಿಜ್ಞಾನಿಗಳು ಹೊಸ ಹೊಸ ತಳಿಗಳನ್ನು ಸಂಶೋಧಿಸಿದ್ದು, ರೈತರಿಗೆ ವಿನಿಮಯ ಮಾಡಬೇಕು. ಕೃಷಿಕರ ಜೀವನ ಬದಲಾವಣೆಗೆ ಕೇಂದ್ರ ಸರ್ಕಾರ ಕಿಸಾನ್​​ ಸಮ್ಮಾನ್, ಫಸಲ್‍ ಭೀಮಾ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಒಕ್ಕಲುತನ ಉತ್ಪನ್ನ ಹರಾಜಿನ ಮೂಲಕ ಮಾರಾಟವಾಗುತ್ತಿದ್ದರೆ, ಕಾರ್ಖಾನೆಗಳು ಉತ್ಪಾದಿಸಿದ ವಸ್ತುಗಳು ನಿಗದಿತ ದರದಲ್ಲಿ ಮಾರಾಟವಾಗುತ್ತಿವೆ. ಇದೊಂದು ದೊಡ್ಡ ದುರಂತ. ಈ ಮೊದಲು ಆಹಾರ ಧಾನ್ಯಗಳ ಕೊರತೆ ಇತ್ತು. ಈಗ ಉತ್ಪಾದನೆ ಹೆಚ್ಚಾಗುತ್ತಿದೆ. ಆದರೆ ಸೂಕ್ತ ಮಾರುಕಟ್ಟೆ ದರ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮನುಷ್ಯ ಯಾಂತ್ರಿಕ ಜೀವನದಿಂದ ಹೊರಬರಬೇಕು. ಇಲ್ಲವಾದಲ್ಲಿ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಜೀವನ ಶೈಲಿಯ ಜೊತೆಗೆ ಆಹಾರ ವಿಧಾನದಲ್ಲಿ ಬದಲಾವಣೆಯಾಗಬೇಕು. ನಮ್ಮಲ್ಲಿ ಬ್ಯೂಟಿನೆಸ್ ಹೆಚ್ಚಾಗಿದ್ದು, ಡ್ಯೂಟಿನೆಸ್ ಕಡಿಮೆಯಾಗುತ್ತಿದೆ ಎಂದರು.

ABOUT THE AUTHOR

...view details