ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಹೋಳಿ ಉತ್ಸವ - ಹಲಗೆ ಮೇಳಕ್ಕೆ ಅದ್ಧೂರಿ ಚಾಲನೆ

ದೇಶದಲ್ಲಿ ಹೋಳಿ ಹಬ್ಬದ ಪ್ರಸಿದ್ಧತೆಯಲ್ಲಿ ಕೋಲ್ಕತ್ತಾ ಬಿಟ್ಟರೆ ಬಾಗಲಕೋಟೆ ಎರಡನೇಯ ಸ್ಥಾನ ಪಡೆದುಕೊಂಡಿದೆ. ಈ ಹೋಳಿ ಉತ್ಸವವನ್ನು ಬಾಗಲಕೋಟೆ ನಗರದಲ್ಲಿ ಜಾತಿ-ಮತ ಭೇದವಿಲ್ಲದೆ ಆಚರಣೆ ಮಾಡುವುದು ವಿಶೇಷವಾಗಿದೆ.

Holi Festival at Bagalkot - drive to halage mela
ಬಾಗಲಕೋಟೆಯಲ್ಲಿ ಹೋಳಿ ಉತ್ಸವ - ಹಲಗೆ ಮೇಳಕ್ಕೆ ಅದ್ಧೂರಿ ಚಾಲನೆ

By

Published : Mar 21, 2021, 4:46 PM IST

ಬಾಗಲಕೋಟೆ: ಮಾಧವ‌ ಸೇವಾ ಸಮಿತಿಯಿಂದ ಹಲಗೆ ಮೇಳ ಆಯೋಜಿಸಲಾಗಿದ್ದು, ಮೇಳಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್​​ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಬಾಗಲಕೋಟೆಯಲ್ಲಿ ಹೋಳಿ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಪ್ರತಿ ವರ್ಷ ಹಲಗೆ ಮೇಳವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್.ಆರ್.ಪಾಟೀಲ್, ದೇಶದಲ್ಲಿ ಹೋಳಿ ಹಬ್ಬದ ಪ್ರಸಿದ್ಧತೆಯಲ್ಲಿ ಕೋಲ್ಕತ್ತಾ ಬಿಟ್ಟರೆ ಬಾಗಲಕೋಟೆ ಎರಡನೇಯ ಸ್ಥಾನ ಪಡೆದುಕೊಂಡಿದೆ. ಈ ಹೋಳಿ ಉತ್ಸವವನ್ನು ಬಾಗಲಕೋಟೆ ನಗರದಲ್ಲಿ ಜಾತಿ-ಮತ ಭೇದವಿಲ್ಲದೆ ಆಚರಣೆ ಮಾಡುವುದು ವಿಶೇಷವಾಗಿದೆ ಎಂದರು.

ಬಾಗಲಕೋಟೆಯಲ್ಲಿ ಹೋಳಿ ಉತ್ಸವ - ಹಲಗೆ ಮೇಳಕ್ಕೆ ಅದ್ಧೂರಿ ಚಾಲನೆ

ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಹೋಳಿ ಆಚರಣೆ ಮಾಡುವುದು ಅಂದರೆ ಕುಣಿಯುವುದು, ಕುಣಿಸುವುದು ಸೇರಿದಂತೆ ಸಂಭ್ರಮದಿಂದ ‌ಆಚರಣೆ ಮಾಡುವುದಾಗಿದೆ ಎಂದರು.

ಇದೇ ಸಮಯದಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ‌ಪಕ್ಷದ‌ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಲಗೆ ಬಾರಿಸುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಹಲಗೆ ಬಾರಿಸುವ ಸದ್ದಿಗೆ ತಕ್ಕಂತೆ ಇತರರು ಕುಣಿಯುವ ಮೂಲಕ ರಂಜಿಸಿದರು. ಜತೆಗೆ ಮಾಧವ ಸೇವಾ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಸೇರಿದಂತೆ ಪ್ರಮುಖ ಮುಖಂಡರು ಹಲಗೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಿದರು.

ಇದನ್ನೂ ಓದಿ:ಬೆಂಗಳೂರು ಹುಡುಗರು ತಂಡದಿಂದ ಸಿಲಿಕಾನ್ ಸಿಟಿಯಲ್ಲಿ 'ಮೊಳೆ ಮುಕ್ತ ಮರ ಅಭಿಯಾನ'

ಇದೇ ವೇಳೆ ಮಹಿಳೆಯರು ಸೇರಿದಂತೆ ಹಲವರು ‌ಹಲಗೆ ಬಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನ ನೀಡಲಾಯಿತು. ಮಾಧವ ಸೇವಾ ಸಮಿತಿಯವರು ಈ ಬಾರಿ ವಿಶೇಷ ವೇದಿಕೆ ಹಾಗೂ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಹಲಗೆ ಮೇಳಕ್ಕೆ ಸಂಭ್ರಮದಿಂದ ಚಾಲನೆ ನೀಡಿರುವುದು ಗಮನ ಸೆಳೆಯಿತು.

ABOUT THE AUTHOR

...view details