ಕರ್ನಾಟಕ

karnataka

ETV Bharat / state

ಕೃಷ್ಣಾ ನದಿ ನೆರೆಗೆ ಜಮಖಂಡಿಯ ಬಸವೇಶ್ವರ ದೇವಾಲಯ ಜಲಮಯ - ಜಮಖಂಡಿ

ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಪ್ರವಾಹದಿಂದ ನಾಗರಪಂಚಮಿ ಹಬ್ಬ ಹಾಗೂ ಶ್ರಾವಣ ಮಾಸದ ಪೂಜೆ ಪುನಸ್ಕಾರ ಮಾಡಲು ಜನತೆ ಪರದಾಡುವಂತಾಗಿದೆ.

ಬಸವೇಶ್ವರ ದೇವಾಲಯ

By

Published : Aug 5, 2019, 8:42 AM IST

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಪ್ರವಾಹದಿಂದ ನಾಗರಪಂಚಮಿ ಹಬ್ಬ ಹಾಗೂ ಶ್ರಾವಣ ಮಾಸದ ಪೂಜೆ ಪುನಸ್ಕಾರ ಮಾಡಲು ಜನತೆ ಪರದಾಡುವಂತಾಗಿದೆ.

ಬಸವೇಶ್ವರ ದೇವಾಲಯ ಜಲಮಯ

ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಹುಬ್ಬಿ ಬಸವೇಶ್ವರ ದೇವಾಲಯ ಜಲಾವೃತವಾಗಿದೆ. ಇದರಿಂದ ಬೆಳಗಿನ ಜಾವ ಪೂಜೆಗೆ ಆಗಮಿಸುವ ಭಕ್ತರು, ನೀರಿನಲ್ಲಿ ತೋಯಿಸಿಕೊಂಡು ದೇವಾಲಯಕ್ಕೆ ಬರುವುದು ಅನಿವಾರ್ಯವಾಗಿದೆ. ದೇವಾಲಯ ಸುತ್ತಲೂ ನೀರು ಆವರಿಸಿರುವ ಹಿನ್ನೆಲೆ ದೇವರ ಮೂರ್ತಿ ಹತ್ತಿರ ಗರ್ಭ ಗುಡಿಯಲ್ಲಿ ನೀರು ಬಂದಿದೆ.

ದೇವಾಲಯದ ಒಳಗೆ ನೀರು ಬಂದಿರುವುದರಿಂದ ನೀರಿನಲ್ಲಿಯೇ ನಡೆದುಕೊಂಡು ಹೋಗುವಂತಾಗಿದ್ದು, ದೇವರ ಮೂರ್ತಿಗೆ ಪೂಜೆ ಪುನಸ್ಕಾರ ಮಾಡಬೇಕಾದರೆ ನೀರಿನಲ್ಲಿ ನಿಂತೇ ಅರ್ಚಕರು ಪೂಜೆ ಸಲ್ಲಿಸಬೇಕಾಗಿದೆ. ಕೃಷ್ಣಾ ನದಿ ಪ್ರವಾಹದಿಂದ ಈ ಬಾರಿ ಶ್ರಾವಣ ಮಾಸ ಹಾಗೂ ನಾಗರಪಂಚಮಿ ಹಬ್ಬವನ್ನು ಸರಿಯಾಗಿ ಆಚರಣೆ ಮಾಡಲಾಗದೇ ಜನ ಪರದಾಡುತ್ತಿದ್ದಾರೆ.

ಹಿಂದುಗಳಿಗೆ ಶ್ರಾವಣ ಮಾಸ ಪವಿತ್ರವಾಗಿದ್ದು, ಭಕ್ತಿಯಿಂದ ಆಚರಿಸುತ್ತಾರೆ. ಆದರೆ ಈ ಬಾರಿ ಪ್ರವಾಹದಿಂದ ಅಚ್ಚುಕಟ್ಟಾಗಿ ಪೂಜೆ ಮಾಡಲು ಆಗುತ್ತಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details