ಕರ್ನಾಟಕ

karnataka

ETV Bharat / state

ಹರಿದು ಬಿದ್ದ ವಿದ್ಯುತ್ ತಂತಿ: 40 ಎಕರೆ ಕಬ್ಬಿನ ಬೆಳೆ ನಾಶ

ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಕಬ್ಬಿನ ಬೆಳೆಗೆ ಬೆಂಕಿ ತಗುಲಿ ಸುಮಾರು 40 ಎಕರೆ ಕಬ್ಬಿನ ಬೆಳೆ ಸುಟ್ಟು ಹೋಗಿದೆ. ಬೆಳೆದು ನಿಂತ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾದ ಪರಿಣಾಮ, ರೈತರು ಕಂಗಾಲಾಗಿದ್ದಾರೆ.

ಕಬ್ಬಿನ ಬೆಳೆ ನಾಶ
ಕಬ್ಬಿನ ಬೆಳೆ ನಾಶ

By

Published : Dec 11, 2021, 10:37 PM IST

ಬಾಗಲಕೋಟೆ : ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಕಬ್ಬಿನ ಬೆಳೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹಾನಿ ಸಂಭವಿಸಿದ ಘಟನೆ ಜಿಲ್ಲಯಲ್ಲಿ ನಡೆದಿದೆ.

ಕಬ್ಬಿನ ಬೆಳೆ ನಾಶ

ಸುಮಾರು 40 ಎಕರೆ ಕಬ್ಬಿನ ಬೆಳೆ ಸುಟ್ಟು ಹೋಗಿದೆ. ಬೆಳೆದು ನಿಂತ ಕಬ್ಬಿನ ಬೆಳೆಯು ಬೆಂಕಿಗೆ ಆಹುತಿಯಾದ ಪರಿಣಾಮ, ರೈತರು ಕಂಗಾಲಾಗಿದ್ದಾರೆ. ಅಂದಾಜು 80 ಲಕ್ಷ ರೂ. ನಷ್ಟವಾಗಿದ್ದು, ಕೈಗೆ ಬಂದ ತುತ್ತೂ ಬಾಯಿಗೆ ಬರದಂತಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಇಂತಹ ಅನಾಹುತವಾಗಿದೆ ಎಂದು ರೈತರು ಆರೋಪಿಸಿ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಶಿವಕಾಂತ ಬಾಂಗಿ, ಪ್ರಭು ತೆರದಾಳ, ಶೀತಲ ತೆರದಾಳ, ಭಿಮು ಹಿಪ್ಪರಗಿ, ಬಸಪ್ಪ ಕೋವಳ್ಳಿ, ಮಲ್ಲಯ್ಯ ಮಠಪತಿ, ರಾಚಯ್ಯ ಮಠಪತಿ ಎಂಬುವವರ ಜಮೀನುಗಳಲ್ಲಿ ಬೆಂಕಿ ತಗುಲಿದೆ.

ಇದನ್ನೂ ಓದಿ : ಅನೈತಿಕ ಸಂಬಂಧ: ಗ್ರಾಮ ಪಂಚಾಯ್ತಿ ಸದಸ್ಯ ಸೇರಿದಂತೆ ಪತ್ನಿ ಕೊಲೆ ಮಾಡಿದ ಗಂಡ

ABOUT THE AUTHOR

...view details