ಕರ್ನಾಟಕ

karnataka

ETV Bharat / state

ಬಾಗಲಕೋಟೆ: ವಿಶೇಷಚೇತನರಿಂದ ಅನಿರ್ದಿಷ್ಟಾವಧಿ ಧರಣಿ - Disabled people Indefinite protest

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕ್ರಾಂತಿ ದಿವ್ಯಾಂಗ ರಾಜ್ಯ ಒಕ್ಕೂಟದ ನೇತೃತ್ವದಲ್ಲಿ ವಿಶೇಷಚೇತನರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

Disabled people Indefinite protest in Bagalkot
ವಿಶೇಷಚೇತನರಿಂದ ಅನಿರ್ದಿಷ್ಟಾವಧಿ ಧರಣಿ

By

Published : Feb 3, 2021, 5:04 PM IST

ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷಚೇತನರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಬಾಗಲಕೋಟೆ: ವಿಶೇಷಚೇತನರಿಂದ ಅನಿರ್ದಿಷ್ಟಾವಧಿ ಧರಣಿ

ಜಿಲ್ಲಾಡಳಿತ ಮುಂಭಾಗದಲ್ಲಿ ಜಿಲ್ಲಾ ಕ್ರಾಂತಿ ದಿವ್ಯಾಂಗ ರಾಜ್ಯ ಒಕ್ಕೂಟದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಕುಳಿತ ವಿಶೇಷಚೇತನರು, ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಾಸಾಶನ 5 ಸಾವಿರ ರೂ.ಗೆ ಏರಿಕೆ, ರಾಜ್ಯಾದ್ಯಂತ ಬಸ್ ಪಾಸ್, ಸಿದ್ದಗಂಗಾ ಶ್ರೀ, ಪುಟ್ಟರಾಜ ಗವಾಯಿಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ. ಸಂಸದರ, ಶಾಸಕರ ನಿಧಿಯಿಂದ ವಿಶೇಷಚೇತನರಿಗೆ ಅನುದಾನ ಬಂದರೂ ಸರಿಯಾಗಿ ವಿತರಣೆ ಆಗದೆ, ಬೇರೆಯವರ ಪಾಲಾಗುತ್ತದೆ. ಇದನ್ನು ತಡೆದು ವಿಶೇಷಚೇತನರಿಗೆ ವಿತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ವಕ್ತಾರ ನಾಗರಾಜ್ ಹದ್ಲಿ ಬೆಂಬಲ ನೀಡಿ, ಸರ್ಕಾರದ ಧೋರಣೆಯನ್ನು ವಿರೋಧಿಸಿದರು. ಈ ವೇಳೆ ವಿಶೇಷಚೇತನರ ಮುಖಂಡ ರಘು ಹುಬ್ಬಳ್ಳಿ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details