ಬಾಗಲಕೋಟೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಸಚಿವ ಗೋವಿಂದ ಕಾರಜೋಳ ಹಾಗೂ ಮುರುಗೇಶ ನಿರಾಣಿ ಅವರು ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿದ್ದರು. ಮುಧೋಳ ನಗರದ ತಹಶೀಲ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಮುಂಚೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ತೊಂದರೆ ಇಲ್ಲ, ಲಿಂಗಾಯತರಿಗೆ ಸಮರ್ಪಕವಾಗಿ ಮನ್ನಣೆ ನೀಡಿದ್ದು ಬಿಜೆಪಿ. ಕಾಂಗ್ರೆಸ್ ಪಕ್ಷ ಲಿಂಗಾಯತರನ್ನ ಕಡೆಗಣಿಸುತ್ತಾ ಬಂದಿದೆ ಎಂದ ಅವರು, ಬಿಜೆಪಿ ಪಕ್ಷ ಯಾರ ಕಪಿ ಮುಷ್ಠಿಯಲ್ಲೂ ಇಲ್ಲ. ಅದೊಂದು ಯೋಜನಾ ಬದ್ಧ ಪಕ್ಷವಾಗಿದೆ. ಯಾರಿಗೆ ಯಾರೂ ಟಿಕೆಟ್ ತಪ್ಪಿಸಿಲ್ಲ. ಹೈಕಮಾಂಡ್ ನಾಯಕರು ಎಲ್ಲ ನೋಡಿಕೊಂಡು ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.
ಸಚಿವ ಗೋವಿಂದ ಕಾರಜೋಳ ಪರವಾಗಿ ಮತಯಾಚನೆ:ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸೀಟ್ ಬಿಜೆಪಿ ಪಡೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಧೋಳ ನಗರದ ರನ್ನ ವೃತ್ತದಲ್ಲಿ ಬಹಿರಂಗ ಭಾಷಣ ಮಾಡಿದರ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಇದೇ ವೇಳೆ ಸಿಎಂ ವ್ಯಂಗ್ಯವಾಡಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅದು ಚುನಾವಣೆವರೆಗೂ ಮಾತ್ರ. ಆ ಬಳಿಕ ಅದು ಗಳಗಂಟಿ(ಘಂಟೆ) ಆಗಲಿದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ಮುಧೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಗೋವಿಂದ ಕಾರಜೋಳ ಪರವಾಗಿ ಇದೇ ವೇಳೆ ಸಿಎಂ ಭರ್ಜರಿಯಾಗೇ ಮತಯಾಚನೆ ಮಾಡಿದರು.
ಇದನ್ನೂ ಓದಿ:ಇನ್ಮುಂದೆ ಅವರ ದಾರಿ ಅವರದು, ನಮ್ಮ ದಾರಿ ನಮ್ಮದು: ಬಿ.ಎಸ್.ಯಡಿಯೂರಪ್ಪ