ಕರ್ನಾಟಕ

karnataka

ETV Bharat / state

'ಸಿಎಂ ಆಗಿ ಏನು ಮಾಡುವುದಿದೆ ?': ಪರೋಕ್ಷವಾಗಿ ಟಾಂಗ್ ನೀಡಿದ್ರಾ ಯತ್ನಾಳ್​ ? - ಮಾಜಿ ಶಾಸಕ ವಿಜಯಾನಂದ ಕಾಶಪ್ಪ

ನನ್ನ ಹಿಂದೆ ಲಿಂಗಾಯತ ಸಮುದಾಯ ಇದೆ, ನನ್ನನ್ನು ತೆಗೆದರೆ ಪಕ್ಷ ನಾಶವಾಗುತ್ತದೆ ಎಂದು ಅಧಿಕಾರ ಪಡೆದಕೊಂಡಿರುವ ಸಿಎಂ ಬಿಎಸ್​​ವೈ ವಿರುದ್ಧ ಯತ್ನಾಳ ಪರೋಕ್ಷವಾಗಿ ಟಾಂಗ್ ನೀಡಿದರು.

basanagowda-patil-yatnal-talk
ಪರೋಕ್ಷವಾಗಿ ಟಾಂಗ್ ನೀಡಿದ್ರ ಯತ್ನಾಳ

By

Published : Jan 14, 2021, 10:01 PM IST

Updated : Jan 14, 2021, 11:42 PM IST

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಆಗ್ರಹಿಸಿ ಆಯೋಜನೆ ಮಾಡಿಕೊಂಡಿರುವ ಕೂಡಲಸಂಗಮದಿಂದ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಸಮಾವೇಶವು ಕೂಡಲಸಂಗಮದ ಪಂಚಮಸಾಲಿ ಪೀಠದ ಆವರಣದಲ್ಲಿ ಜರುಗಿತು.

ಪರೋಕ್ಷವಾಗಿ ಟಾಂಗ್ ನೀಡಿದ್ರಾ ಯತ್ನಾಳ್​

ಸಮಾರಂಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಪಂಚಮಸಾಲಿ ಶ್ರೀಗಳಿಗೆ ಹಸಿರು ಶಾಲು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಯತ್ನಾಳ ಮಾತನಾಡಿ, ಯಾರ ಬಗ್ಗೆಯೇ ಆಗಲಿ, ಒಳ್ಳೆಯದು-ಕೆಟ್ಟದು ಮಾತನಾಡುತ್ತಾ ಇರುತ್ತೇನೆ. ಕೆಲವರು ಹೇಳುತ್ತಾರೆ ಬಸನಗೌಡ ಸುಮ್ಮನೆ ಇದ್ದರೆ ಮುಖ್ಯಮಂತ್ರಿ ಆಗುತ್ತಿದ್ದೀರಿ ಎಂದು. ಆದರೆ ಮುಖ್ಯಮಂತ್ರಿ ಆಗಿ ಏನು ಮಾಡುವುದಿದೆ ಎಂದರು.

ಇದನ್ನೂ ಓದಿ: ಹೊಸತನದೊಂದಿಗೆ ಪಕ್ಷ ಸಂಘಟನೆಗೆ ಜೆಡಿಎಸ್ ಸಿದ್ದತೆ: ಹೆಚ್​.ಡಿ ಕುಮಾರಸ್ವಾಮಿ

ಯಾವುದೇ ಸಮುದಾಯದವನ್ನು ಬಲಿಕೊಟ್ಟು, ಹೋರಾಟ ಕೈ ಬಿಡಿ ಎಂದರೆ, ನಾನು ಹೋರಾಟ ಬಿಡುವುದಿಲ್ಲ. ಹೇಗೆ ಮೀಸಲಾತಿ ಪಡೆದುಕೊಳ್ಳುಬೇಕು ಎಂಬುದು ನಮಗೆ ಗೊತ್ತು, ನಾವು ಹಾಗೇ ಮಾಡಿ ತೋರಿಸುತ್ತೇವೆ. ಏಕೆಂದರೆ ಈ ಸಭೆಯಲ್ಲಿ ಹಾಲಿ ಶಾಸಕ ಇರುವುದು ನಾನು ಒಬ್ಬನೇ, ಅಷ್ಟು ಧೈರ್ಯ ಇಲ್ಲದೇ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವೇ ಎಂದು ತಿಳಿಸಿದರು.

ನಾನು ಯಾರ ಹತ್ತಿರ ಇದುವರೆಗೂ ಮಂತ್ರಿ ಮಾಡಿ ಎಂದು ಹೋಗಿಲ್ಲ. ಪ್ರಧಾನಿ ಅಟಲ್ ಬಿಹಾರಿ ಅವರು ನನಗೆ ಗುರುತಿಸಿ ಕೇಂದ್ರದಲ್ಲಿ ಮಂತ್ರಿ ಮಾಡಿದರು. ಅವರ ಋಣ ತಿರಿಸಲು, ಅವರ ಪುತ್ಥಳಿ ನಿರ್ಮಾಣ ಮಾಡಿದ್ದೇನೆ ಎಂದರು. ನನ್ನ ಹಿಂದೆ ಲಿಂಗಾಯತ ಸಮುದಾಯ ಇದೆ, ನನ್ನನ್ನು ತೆಗೆದರೆ ಪಕ್ಷ ನಾಶವಾಗುತ್ತದೆ ಎಂದು ಅಧಿಕಾರ ಪಡೆದಕೊಂಡಿರುವ ಮುಖ್ಯಮಂತ್ರಿ ವಿರುದ್ದ ಪರೋಕ್ಷವಾಗಿ ಟಾಂಗ್ ನೀಡಿದರು.

ಈ ಸಂದರ್ಭ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ವಚನಭ್ರಷ್ಟ ಅಲ್ಲ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಹಿಂದೆ ನಮ್ಮ ಶ್ರೀಗಳಿಗೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಈಗ ನಮ್ಮ ಪಾದಯಾತ್ರೆ ತಡೆಯಲು ಸಾಕಷ್ಟು ತಂತ್ರ ಮಾಡುತ್ತಿರುವ ಸಿಎಂಗೆ ನಮ್ಮ ಬಲ ಏನು ಎಂದು ತೋರಿಸುತ್ತೇವೆ, ತಾಕತ್ತು ಇದ್ದರೆ ತಡೆಯಲಿ ನೋಡೋಣ ಎಂದು ಸವಾಲ್ ಹಾಕಿದರು.

Last Updated : Jan 14, 2021, 11:42 PM IST

ABOUT THE AUTHOR

...view details