ಕರ್ನಾಟಕ

karnataka

ವಿಧಾನ ಪರಿಷತ್ ಚುನಾವಣೆ : ಮತ ಚಲಾಯಿಸಿದ ಸಂಸದ, ಶಾಸಕರು

By

Published : Dec 10, 2021, 12:29 PM IST

ವಿಜಯಪುರ, ಬಾಗಲಕೋಟೆ ದ್ವಿ-ಸದಸ್ಯ ಸ್ಥಾನದ ಚುನಾವಣೆ ಹಿನ್ನೆಲೆ, ಬಾಗಲಕೋಟೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಮತ್ತು ಶಾಸಕ ವೀರಣ್ಣ ಚರಂತಿಮಠ ತಮ್ಮ ಹಕ್ಕು ಚಲಾಯಿಸಿದರು..

Bagalkot MLC Election updates
ವಿಧಾನ ಪರಿಷತ್ ಚುನಾವಣೆ: ಮತ ಚಲಾಯಿಸಿದ ಸಂಸದ, ಶಾಸಕರು

ಬಾಗಲಕೋಟೆ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು ಮತದಾನ ಪ್ರಕ್ರಿಯೆ ಮುಂಜಾನೆಯಿಂದಲೇ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ.

ವಿಜಯಪುರ, ಬಾಗಲಕೋಟೆ ದ್ವಿ-ಸದಸ್ಯ ಸ್ಥಾನದ ಚುನಾವಣೆ ಹಿನ್ನೆಲೆ, ಬಾಗಲಕೋಟೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಮತ್ತು ಶಾಸಕ ವೀರಣ್ಣ ಚರಂತಿಮಠ ನಗರಸಭೆ ಕಾರ್ಯಾಲಯದಲ್ಲಿರುವ ಮತ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ವಿಧಾನ ಪರಿಷತ್ ಚುನಾವಣೆ.. ಮತ ಚಲಾಯಿಸಿದ ಸಂಸದ ಪಿ.ಸಿ. ಗದ್ದಿಗೌಡರ ಮತ್ತು ಶಾಸಕ ವೀರಣ್ಣ ಚರಂತಿಮಠ

ಮತಗಟ್ಟೆ ಸಂಖ್ಯೆ 305ರಲ್ಲಿ ನಗರಸಭೆ ಸದಸ್ಯರು ಮತದಾನ ಮಾಡಿದರು. ಮತದಾನದ ಬಳಿಕ ಶಾಸಕ ವೀರಣ್ಣ ಚರಂತಿಮಠ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ತಮ್ಮ ಅಭ್ಯರ್ಥಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಮೊದಲ ಪ್ರಾಶಸ್ತ್ಯದ ಮತಗಳಿಂದ ನಮ್ಮ ಅಭ್ಯರ್ಥಿ ಪಿ.ಹೆಚ್ ಪೂಜಾರ್ ಗೆಲುವು ನಿಶ್ಚಿತ. ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ ಪಕ್ಷದ ಅಭಿವೃದ್ಧಿಗೆ ಮತದಾರರು ಬೆಂಬಲಿಸುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಎಸ್.ಆರ್ ಪಾಟೀಲ ಸಹ ಬೀಳಗಿ ಪಟ್ಟಣದಲ್ಲಿ ಮತದಾನ ಮಾಡಿದರು. ಬೀಳಗಿ ಪಟ್ಟಣ ಪಂಚಾಯತ್​​ ಕಾರ್ಯಾಲಯದ ಮತಗಟ್ಟೆ ಸಂಖ್ಯೆ 334ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ ಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details