ಬಾಗಲಕೋಟೆ:ಜಿಲ್ಲೆಯಲ್ಲಿ ಇಂದು 212 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ನಡುವೆ 165 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆಯಲ್ಲಿಂದು 212 ಹೊಸ ಕೊರೊನಾ ಕೇಸ್ ಪತ್ತೆ...165 ಮಂದಿ ಡಿಸ್ಚಾರ್ಜ್ - 212 New corona cases reported ion Bagalkote
ಬಾಗಲಕೋಟೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ಸಹ 212 ಹೊಸ ಪ್ರಕರಣಗಳು ವರದಿಯಾಗಿದೆ. ಅಲ್ಲದೆ 165 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,399 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಒಟ್ಟು 6,228 ಜನ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 83, ಬಾದಾಮಿ 33, ಹುನಗುಂದ 32, ಬೀಳಗಿ 15, ಮುಧೋಳ 17, ಜಮಖಂಡಿ 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನೂ 1,405 ಸ್ಯಾಂಪಲ್ಗಳ ವರದಿ ಬಾಕಿ ಇದ್ದು, ಪಾಸಿಟಿವ್ ಬಂದವರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 73,254 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 64,138 ಮಂದಿಗೆ ನೆಗೆಟಿವ್ ಬಂದಿದೆ. 7,399 ಪಾಸಿಟಿವ್ ಪ್ರಕರಣ ಹಾಗೂ 81 ಜನ ಪಟ್ಟಿದ್ದಾರೆ. ಇನ್ನು 1,043 ಸಕ್ರಿಯ ಪ್ರಕರಣಗಳಿವೆ.