ಬಾಗಲಕೋಟೆ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸುಮಾರು ₹1500 ಕೋಟಿ ನಷ್ಟವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಅಧಿಕಾರಿಗಳ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ದೃಷ್ಟಿಯಿಂದ ಎಲ್ಲಾ ವರದಿಯನ್ನು ತಯಾರಿಸಲಾಗುತ್ತಿದೆ. ಇತ್ತೀಚಿನ ಸತತ ಮಳೆಯಿಂದ ಫಲವತ್ತಾದ ಬೆಳೆ,ಗ್ರಾಮೀಣ ಪ್ರದೇಶದ ಮನೆಗಳು ಕುಸಿದು ಬಿದ್ದಿವೆ. ಅಲ್ಲದೇ, ಮುಂದಿನ 15 ದಿನಗಳವರೆಗೆ ಮನೆಗಳು ಬೀಳುವ ಸಾಧ್ಯತೆ ಇದ್ದು, ಸರ್ವೇ ಕಾರ್ಯ ಮುಂದುವರೆಯಲಿದೆ ಎಂದರು.