ಟೊಕಿಯೋ:ವಿಶ್ವದ ನಂಬರ್ 1 ಬಾಕ್ಸರ್ ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ವಿರುದ್ದ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಲು ಭಾರತದ ಬಾಕ್ಸರ್ ಸತೀಶ್ ಕುಮಾರ್ಗೆ ಅನುಮತಿ ದೊರೆತಿದೆ.
ಭಾರತದ ಮೊದಲ ಸೂಪರ್ ಹೆವಿ ವೆಯ್ಟರ್ (+91 ಕೆ.ಜಿ) ಬಾಕ್ಸರ್ ಆಗಿರುವ ಕುಮಾರ್, ಜಮೈಕಾದ ರಿಚರ್ಡೊ ಬ್ರೌನ್ ವಿರುದ್ಧದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಗಾಯಗೊಂಡಿದ್ದರು. ಚಿಕಿತ್ಸೆಯ ವೇಳೆ ಅವರಿಗೆ ಏಳು ಹೊಲಿಗೆಗಳನ್ನು ಹಾಕಲಾಗಿತ್ತು. ಮೊದಲ ಪಂದ್ಯದಲ್ಲಿ 4-1 ಅಂತರದಿಂದ ಬ್ರೌನ್ ಅವರನ್ನು ಸೋಲಿಸಿದ್ದರು. ಇವರು ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದಾರೆ.
ಉಜ್ಬೇಕಿಸ್ತಾನದ ಬಖೋಡಿರ್ ಜಲೋಲೋವ್ ಹಾಲಿ ವಿಶ್ವ ಮತ್ತು ಏಷ್ಯನ್ ಚಾಂಪಿಯನ್. ಕೊನೆಯ 16 ನೇ ಪಂದ್ಯದಲ್ಲಿ ಆಝರ್ಬಿಜಾನ್ನ ಮುಹಮ್ಮದ್ ಅಬ್ಬುಲ್ಲಾಯೆವ್ ಅನ್ನು 5-0 ಅಂತರದಿಂದ ಸೋಲಿಸಿದ್ದರು.
ಇದನ್ನೂಓದಿ: Tokyo Olympics: ವೃತ್ತಿ ಜೀವನದ ಮೊದಲ ಚಿನ್ನದ ಪದಕ ಫೆಡರರ್ಗೆ ಅರ್ಪಿಸಿದ ಬೆನ್ಸಿಕ್
ಉತ್ತರ ಪ್ರದೇಶದ ಬುಲಂದರ್ಶಹರ್ ನಿವಾಸಿ ಸತೀಶ್ ಕುಮಾರ್, ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಕಬಡ್ಡಿ ಆಟದಲ್ಲಿ ಆಸಕ್ತಿ ಹೊಂದಿದ್ದು, ಸೇನಾ ತರಬೇತುದಾರರ ಮೂಲಕ ಉತ್ತಮ ಮೈಕಟ್ಟಿನ ಕಾರಣದಿಂದ ಕ್ರೀಡೆಗೆ ಪರಿಚಯಿಸಲ್ಪಟ್ಟರು. ಸತೀಶ್ ಕುಮಾರ್ ಏಷ್ಯನ್ ಗೇಮ್ಸ್ನ ಕಂಚು ಮತ್ತು ಕಾಮನ್ವೆಲ್ತ್ ಗೇಮ್ಸ್ನ ಬೆಳ್ಳಿ ವಿಜೇತರು ಕೂಡಾ ಹೌದು.
ಭಾರತವು ಟೋಕಿಯೋ ಒಲಿಂಪಿಕ್ಸ್ನ ಕಡಿಮೆ ತೂಕದ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಶನಿವಾರ ಅಮಿತ್ ಪಂಘಾಲ್ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ ಬಳಿಕ, ಈಗ ಉಳಿದಿರುವ ಏಕೈಕ ಭಾರತೀಯ ಪುರುಷ ಬಾಕ್ಸರ್ ಸತೀಶ್ ಕುಮಾರ್ ಮಾತ್ರ.
ಇಲ್ಲಿಯವರೆಗೆ, ಅಮಿತ್ ಪಂಘಲ್ (52 ಕೆಜಿ), ಮನೀಶ್ ಕೌಶಿಕ್ (63 ಕೆಜಿ), ವಿಕಾಸ್ ಕ್ರಿಶನ್ (69 ಕೆಜಿ) ಮತ್ತು ಆಶಿಶ್ ಚೌಧರಿ (75 ಕೆಜಿ) ಆರಂಭಿಕ ಸುತ್ತುಗಳಲ್ಲೇ ಸೋಲು ಕಂಡಿದ್ದಾರೆ.