ಕರ್ನಾಟಕ

karnataka

Wimbledon : ಫೈನಲ್​​ನಲ್ಲಿ ಕರೋಲಿನಾ ಪ್ಲಿಸ್ಕೋವಾ-ಆಶ್ಲೆ ಬಾರ್ಟಿ ಮುಖಾಮುಖಿ

By

Published : Jul 9, 2021, 11:27 AM IST

Updated : Jul 9, 2021, 12:14 PM IST

ಮತ್ತೊಂದು ಸೆಮಿಫೈನಲ್‌ನಲ್ಲಿ ಕರೋಲಿನಾ ಅವರು ಬೆಲಾರಸ್‌ನ ಆರ್ಯನಾ ಸಬಲೆಂಕಾ ಅವರನ್ನು ಮೂರು ಸೆಟ್‌ಗಳ ಹಣಾಹಣಿಯಲ್ಲಿ ಹಿಮ್ಮೆಟ್ಟಿಸಿದ್ದರು. ಮೊದಲ ಸೆಟ್‌ನ ಸೋಲಿನ ಬಳಿಕ ತಿರುಗೇಟು ನೀಡಿದ್ದ ಕರೋಲಿನಾ ಸುಮಾರು ಎರಡು ಗಂಟೆಗಳ ಹೋರಾಟದಲ್ಲಿ 5.7, 6-4,6-4ರಿಂದ ಜಯ ಸಾಧಿಸಿದ್ದರು..

Wimbledon, Wimbledon final, Wimbledon final news,  Ashleigh to meet Karolina, Ashleigh to meet Karolina in final, ವಿಂಬಲ್ಡನ್​, ವಿಂಬಲ್ಡನ್​ ಫೈನಲ್​, ವಿಂಬಲ್ಡನ್​ ಫೈನಲ್​ ಸುದ್ದಿ, ಕರೋಲಿನಾ ಪ್ಲಿಸ್ಕೋವಾಳನ್ನು ಎದುರಿಸಲಿರುವ ಆಶ್ಲೀಗ್ ಬಾರ್ಟಿ, ಕರೋಲಿನಾ ಪ್ಲಿಸ್ಕೋವಾಳನ್ನು ಎದುರಿಸಲಿರುವ ಆಶ್ಲೀಗ್ ಬಾರ್ಟಿ ಸುದ್ದಿ,
ಕೃಪೆ: Twitter

ಲಂಡನ್ :ಆಸ್ಟ್ರೇಲಿಯಾದ ಆಟಗಾರ್ತಿ ಆಶ್ಲೆ ಬಾರ್ಟಿ ವಿಂಬಲ್ಡನ್​ ಓಪನ್​ ಟೆನ್ನಿಸ್​ ಟೂರ್ನಿಯ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. 2018ರ ಚಾಂಪಿಯನ್​ ಏಂಜೆಲಿಕ್ ಕೆರ್ಬರ್ ಅವರನ್ನು ಮಣಿಸಿ ಈ ಸಾಧನೆಗೈದರು. 5 ವರ್ಷಗಳ ಬಳಿಕ ನಂ. 1 ಆಟಗಾರ್ತಿ ಅಂತಿಮ ಸುತ್ತು ಪ್ರವೇಶಿಸಿದಂತಾಗಿದೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಶ್ಲೆ ಬಾರ್ಟಿ, ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು 6-3, 7-6 (3) ಸೆಟ್‌ಗಳಿಂದ ಸೋಲಿಸಿ ಫೈನಲ್​ ಪ್ರವೇಶಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾದ ಟೆನಿಸ್ ಪಡೆಯನ್ನು ಮುನ್ನಡೆಸಲಿರುವ ಆಶ್ಲೆ ಬಾರ್ಟಿ, ಜರ್ಮನಿಯ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಲು ಒಂದು ಗಂಟೆ 26 ನಿಮಿಷ ತೆಗೆದುಕೊಂಡರು. ಫೈನಲ್‌ನಲ್ಲಿ ಅವರು ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದ್ದಾರೆ.

ಕೃಪೆ: Twitter

ಮತ್ತೊಂದು ಸೆಮಿಫೈನಲ್‌ನಲ್ಲಿ ಕರೋಲಿನಾ ಅವರು ಬೆಲಾರಸ್‌ನ ಆರ್ಯನಾ ಸಬಲೆಂಕಾ ಅವರನ್ನು ಮೂರು ಸೆಟ್‌ಗಳ ಹಣಾಹಣಿಯಲ್ಲಿ ಹಿಮ್ಮೆಟ್ಟಿಸಿದ್ದರು. ಮೊದಲ ಸೆಟ್‌ನ ಸೋಲಿನ ಬಳಿಕ ತಿರುಗೇಟು ನೀಡಿದ್ದ ಕರೋಲಿನಾ ಸುಮಾರು ಎರಡು ಗಂಟೆಗಳ ಹೋರಾಟದಲ್ಲಿ 5.7, 6-4,6-4ರಿಂದ ಜಯ ಸಾಧಿಸಿದ್ದರು.

ಆಶ್ಲೆ ಬಾರ್ಟಿ ಈ ಹಿಂದೆ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಅಂದ್ರೆ 2019ರಲ್ಲಿ ಫ್ರೆಂಚ್ ಓಪನ್ ಚಾಂಪಿಯನ್​ ಆಗಿದ್ದರು. ಫೈನಲ್​ ಪಂದ್ಯವು ನಾಳೆ ನಡೆಯಲಿದ್ದು, ಇಬ್ಬರು ಅಗ್ರ ಆಟಗಾರ್ತಿಯರ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಬಹುದಾಗಿದೆ.

Last Updated : Jul 9, 2021, 12:14 PM IST

ABOUT THE AUTHOR

...view details