ಪ್ಯಾರೀಸ್: 'ಆವೆ ಮಣ್ಣಿನ ಅಂಕಣದ ದೊರೆ' ಎಂದೇ ಖ್ಯಾತರಾದ ಸ್ಪೇನಿನ ರಫೇಲ್ ನಡಾಲ್ ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಮಣಿಸುವ ಮೂಲಕ 12ನೇ ಬಾರಿ ಫ್ರೆಂಚ್ ಓಪನ್ ಹಾಗೂ 18 ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸೆಮಿಫೈನಲ್ನಲ್ಲಿ ಮೊದಲ ಶ್ರೇಯಾಂಕದ ನುವಾಕ್ ಜಾಕೋವಿಕ್ಗೆ ಆಘಾತ ನೀಡಿ ಫೈನಲ್ ಪ್ರವೇಶಿಸಿದ್ದ ಥೀಮ್ರನ್ನು ನಡಾಲ್ 6-3, 7-5,6-1,6-1ರಲ್ಲಿ ಸೋಲಿಸಿ ಫ್ರೆಂಚ್ ಓಪನ್ ಚಾಂಪಿಯನ್ ಆದರು.
ಮೊದಲ ಸೆಟ್‌ನ್ನು 6-3ರಲ್ಲಿ ಸುಲಭವಾಗಿ ಗೆದ್ದ ನಡಾಲ್ಗೆ ಥೀಮ್ ಎರಡನೇ ಸೆಟ್ನಲ್ಲಿ 7-5ರಲ್ಲಿ ಗೆದ್ದು ತಿರುಗೇಟು ನೀಡಿದರು. ಆದರೆ ನಂತರದ ಎರಡು ಸೆಟ್ಗಳನ್ನು 6-1,6-1 ರಲ್ಲಿ ಗೆದ್ದ ನಡಾಲ್, ಫ್ರೆಂಚ್ ಓಪನ್ನಲ್ಲಿ ತಾವೇ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
ಈ ಮೂಲಕ 33 ವರ್ಷದ ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಬರೋಬ್ಬರಿ 12ನೇ ಗೆದ್ದ ಮೊದಲ ಟೆನ್ನಿಸ್ ಪ್ಲೇಯರ್ ಎನಿಸಿಕೊಂಡರು. ಮಹಿಳಾ ಅಥವಾ ಪುರುಷರ ಟೆನ್ನಿಸ್ ಇತಿಹಾಸದಲ್ಲಿ ಯಾವೊಬ್ಬ ಪ್ಲೇಯರ್ ಕೂಡಾ 12 ಬಾರಿ ಒಂದೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದ ಉದಾಹರಣೆ ಇಲ್ಲ.