ಬ್ರಿಸ್ಬೇನ್(ಆಸ್ಟ್ರೇಲಿಯಾ):ಸರ್ಬಿಯಾದ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದ್ದು, ಅವರ ವೀಸಾವನ್ನು ರದ್ದುಗೊಳಿಸಲಾಗಿದೆ. ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಪಾಲ್ಗೊಳ್ಳಲು ಮೆಲ್ಬೋರ್ನ್‌ಗೆ ಆಗಮಿಸಿದ ನಂತರ ಅವರಿಗೆ ನಿರ್ಬಂಧ ಹೇರಲಾಗಿದೆ.
ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ಗುರುವಾರ ಮುಂಜಾನೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಜೊಕೊವಿಕ್ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲರಾಗಿರುವ ಕಾರಣದಿಂದ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಆಸ್ಟ್ರೇಲಿಯಾಗೆ ತೆರಳುವ ಮೊದಲು ವ್ಯಾಕ್ಸಿನೇಷನ್ ನಿಯಮಗಳಿಂದ ವಿನಾಯಿತಿ ದೊರೆತಿದೆ ಎಂದಿದ್ದ ನೊವಾಕ್ ಜೊಕೊವಿಕ್ ಅವರು ಬುಧವಾರ ಸಂಜೆ ಮೆಲ್ಬೋರ್ನ್ನಲ್ಲಿ ಬಂದಿಳಿದ ನಂತರ ಅವರು ಸೂಕ್ತ ಪುರಾವೆ ಒದಗಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಮೇಲೆ ವೀಸಾವನ್ನು ರದ್ದುಗೊಳಿಸಿ, ಆಸ್ಟ್ರೇಲಿಯಾದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಜೊಕೊವಿಕ್ ತಪ್ಪು ರೀತಿಯ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಸರ್ಬಿಯಾದ ಅಧ್ಯಕ್ಷರು ಇದನ್ನು ಕಿರುಕುಳ ಎಂದು ಆರೋಪಿಸಿದ್ದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನಿಯಮಗಳು ಎಲ್ಲರಿಗೂ ಒಂದೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ನೋಡಿ: ಜಾನ್ಸೆನ್ ಬೌನ್ಸರ್‌ಗೆ ತಾಳ್ಮೆ ಕಳೆದುಕೊಂಡ ಬುಮ್ರಾ