ನವದೆಹಲಿ:ಇಂದಿನಿಂದ ಟೋಕಿಯೋ ಒಲಿಂಪಿಕ್ ಆರಂಭವಾಗುತ್ತಿದ್ದು, ಭಾರತೀಯ ಕ್ರೀಡಾಪಟುಗಳು ಈಗಾಗಲೇ ಜಪಾನ್ ತಲುಪಿದ್ದಾರೆ. ಈ ನಡುವೆ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರ ಜೊತೆ ಫಿಸಿಯೋ ಕಳುಹಿಸುವಂತೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ ಮನವಿ ಮಾಡಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹೌದು ಆಕೆ ಮೌಖಿಕವಾಗಿ ಈ ಮನವಿ ಮಾಡಿಕೊಂಡಿದ್ದಾರೆ. ಐಒಎ ಮತ್ತು ಎಸ್ಎಐಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಈ ಹಂತದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬಹುದು, ನಾವೇನು ಪರಿಹಾರ ನೀಡಬಹುದು ಎಂಬುದನ್ನು ನೋಡುತ್ತಿದ್ದೇವೆ ಎಂದಿದ್ದಾರೆ.