ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಮಂಕಾಗಿದ್ದಾರೆ. ಅವರ ಬ್ಯಾಟ್ನಿಂದ ನಿರೀಕ್ಷಿತ ಮಟ್ಟದ ರನ್ಗಳು ಸಿಡಿಯುತ್ತಿಲ್ಲ. ಇದರಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಉಂಟಾಗಿದೆ. ಅದರಲ್ಲೂ, ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಕಳೆದ 14 ಪಂದ್ಯಗಳಲ್ಲಿ ಒಂದೇ ಒಂದು ಅರ್ಧ ಶತಕ ಸಿಡಿಸಿಲ್ಲ. ಆದರೆ, ಶನಿವಾರ ನಡೆದ ಗುಜರಾತ್ ಟೈಟನ್ಸ್ ವಿರುದ್ಧ 58 ರನ್ಗಳನ್ನು ಬಾರಿಸಿರುವ ಅವರು ಅಭಿಮಾನಿಗಳಲ್ಲಿ ಮತ್ತೆ ನಿರೀಕ್ಷೆ ಹೆಚ್ಚಿಸಿದರು. ಅಷ್ಟೇ ಅಲ್ಲ, ಎದುರಾಳಿ ತಂಡದ ಬೌಲರ್ ಮಮಮ್ಮದ್ ಶಮಿ ಸಹ ವಿರಾಟ್ ಆಟದಿಂದ ಸಂತಸಗೊಂಡರು.
ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಹಿಂದಿನ ಮೂರು ಪಂದ್ಯಗಳಲ್ಲಿ ಕ್ರಮವಾಗಿ 9, 0, 0ಗೆ ಓಟ್ ಆಗಿದ್ದರು. ಆದರೆ, ಶನಿವಾರದ ಪಂದ್ಯದಲ್ಲಿ45 ಎಸೆತಗಳಲ್ಲಿ 50 ರನ್ಗಳನ್ನು ಬಾರಿಸಿ ಮತ್ತೆ ಲಯಕ್ಕೆ ಮರಳುವ ಸೂಚನೆ ಕೊಟ್ಟಿದ್ದಾರೆ. ಒಟ್ಟಾರೆ 53 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 58 ರನ್ ಸಿಡಿಸಿದ್ದಾರೆ.