ರಾಂಚಿ (ಜಾರ್ಖಂಡ್):ಏಷ್ಯನ್ ಹಾಕಿ ಫೆಡರೇಶನ್ ಮತ್ತು ಹಾಕಿ ಇಂಡಿಯಾ ಮಂಗಳವಾರ ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ರಾಂಚಿ 2023ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 27 ರಂದು ಮಲೇಷ್ಯಾ ಮತ್ತು ಜಪಾನ್ ನಡುವಿನ ಮೊದಲ ಪಂದ್ಯದೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಸ್ಟೇಡಿಯಂನಲ್ಲಿ ಆತಿಥೇಯ ಭಾರತವು ದಿನದ ಮೂರನೇ ಪಂದ್ಯದಲ್ಲಿ ಥಾಯ್ಲೆಂಡ್ ಅನ್ನು ಎದುರಿಸಲಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿವೆ ತಂಡಗಳು: ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊರಿಯಾ, ಮಲೇಷ್ಯಾ, ಥಾಯ್ಲೆಂಡ್, ಜಪಾನ್, ಚೀನಾ ಮತ್ತು ಭಾರತ ಪೈಪೋಟಿ ನಡೆಸಲಿವೆ. ಆರು ತಂಡಗಳ ಪಂದ್ಯಾವಳಿಯು ಅಕ್ಟೋಬರ್ 27 ರಂದು ಪ್ರಾರಂಭವಾಗಿ ನವೆಂಬರ್ 5ರ ವರೆಗೆ ನಡೆಯಲಿದೆ.
ಎಲ್ಲ ತಂಡಗಳು ಒಂದೇ ಪೂಲ್‌ನ ಭಾಗವಾಗಿದ್ದು, ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಸೆಮಿ - ಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿಸ್ ಹಂತದಲ್ಲಿ ಒಂದನೇ ಮತ್ತು ನಾಲ್ಕನೇ ತಂಡ, ಮೂರು ಮಬತ್ತು ಎರಡನೇ ತಂಡ ಪೈಪೋಟಿಗಿಳಿಯಲಿದೆ. ಇದರಲ್ಲಿ ಗೆದ್ದವರು ಫೈನಲ್ ಆಡಲಿದ್ದಾರೆ. ಈ ವರೆಗೆ ಆರು ಆವೃತ್ತಿಯ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ನಡೆದಿದ್ದು, ಅದರಲ್ಲಿ 2010, 2011 ಮತ್ತು 2016ರಲ್ಲಿ ಜಪಾನ್ ಜಯ ದಾಖಲಿಸಿದೆ. ಈ ಬಾರಿ ಹಾಲಿ ಚಾಪಿಯನ್ ಜಪಾನ್ ತನ್ನ ಮೊದಲ ಪಂದ್ಯದಲ್ಲಿ ಕೊರಿಯಾವನ್ನು ಎದುರಿಸುತ್ತಿದ್ದಾರೆ.
ಲಯದಲ್ಲಿದೆ ಆತಿಥೇಯ ಭಾರತ : ಆತಿಥೇಯ ಭಾರತ ಉತ್ತಮ ಫಾರ್ಮ್ನಲ್ಲಿದೆ. ಗಮನಾರ್ಹವಾಗಿ, ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಕಂಚಿನ ನಂತರ ಮತ್ತು ಎಫ್ಐಹೆಚ್ ಹಾಕಿ ಮಹಿಳಾ ನೇಷನ್ಸ್ ಕಪ್ ಸ್ಪೇನ್ 2022ರಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ, ಆತಿಥೇಯ ತಂಡವು 2016ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. 2018 ರಲ್ಲಿ ರನ್ನರ್ ಅಪ್ ಆಗಿದೆ. ತಂಡವು ಅಕ್ಟೋಬರ್ 27 ರಂದು ಥಾಯ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ನವೆಂಬರ್ 2 ರಂದು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕೊರಿಯಾವನ್ನು ಎದುರಿಸಲಿದೆ.
ಏಷ್ಯನ್ ಹಾಕಿ ಫೆಡರೇಶನ್‌ನ ಅಧ್ಯಕ್ಷ ಡಾಟೊ ಫ್ಯೂಮಿಯೊ ಒಗುರಾ ಮಾತನಾಡಿ,"ಇದು ಏಷ್ಯನ್ ಹಾಕಿ ಸಮುದಾಯಕ್ಕೆ ಒಂದು ಪ್ರಮುಖ ಸಂದರ್ಭವಾಗಿದೆ ಮತ್ತು ಪ್ರತಿಷ್ಠಿತ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉನ್ನತ ಮಟ್ಟದ ಹಾಕಿ ಸ್ಪರ್ಧೆ ನೋಡಲು ನಾವು ಎದುರು ನೋಡುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಹಾಕಿ ಇಂಡಿಯಾಕ್ಕೆ ನನ್ನ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ,"ಮತ್ತೊಂದು ಪ್ರಮುಖ ಏಷ್ಯನ್ ಪಂದ್ಯಾವಳಿಯನ್ನು ಆಯೋಜಿಸಲು ನಾವು ಹೆಮ್ಮೆಪಡುತ್ತೇವೆ. ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ರಾಂಚಿ 2023 ರಲ್ಲಿ ಕೆಲವು ಉನ್ನತ ಮಹಿಳೆಯರ ಹಾಕಿ ತಂಡಗಳ ಉತ್ತಮ ಪ್ರದರ್ಶನವಾಗಿರುತ್ತದೆ." ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಪಾಕಿಸ್ತಾನದ ವಿರುದ್ಧ 'ವಿರಾಟ' ಶತಕ "ಸೂಪರ್ ನಾಕ್, ಸೂಪರ್ ಗೈ" ಎಂದು ಅನುಷ್ಕಾ ಶರ್ಮಾ