ಹೈದರಾಬಾದ್ (ತೆಲಂಗಾಣ):ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಭಾನುವಾರ ಇಲ್ಲಿ ಹೇಳಿದರು. ಏಜೆಸ್ ಫೆಡರಲ್ ಹೈದರಾಬಾದ್ ಹಾಫ್ ಮ್ಯಾರಥಾನ್‌ನ ಹಾಫ್ ಮ್ಯಾರಥಾನ್ ಮತ್ತು 10ಕೆ ಓಟವನ್ನು ಫ್ಲ್ಯಾಗ್ ಆಫ್ ಮಾಡಿದ ನಂತರ ಮಾತನಾಡಿದ ತೆಂಡೂಲ್ಕರ್, ಹೈದರಾಬಾದ್‌ನಲ್ಲಿ ಮ್ಯಾರಥಾನ್ಗೆ ಸಿಕ್ಕ ಪ್ರತಿಕ್ರಿಯೆಯನ್ನು ನೋಡಿ ಹೃದಯ ತುಂಬಿದೆ ಎಂದು ಹೇಳಿದರು.
2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿವೃತ್ತಿ ಪ್ರಕಟಿಸಿದ್ದರೂ ಫಿಟ್ನೆಸ್ನ್ನು ಹಾಗೇ ಕಾಯ್ದುಕೊಂಡಿದ್ದಾರೆ. 16ನೇ ವರ್ಷಕ್ಕೆ ಕ್ರಿಕೆಟ್ ಆಡಲು ಆರಂಭಿಸಿದ್ದ ಸಚಿನ್ 40ನೇ ವಯಸ್ಸಿನವರೆಗೂ ಮೈದಾನಕ್ಕಿಳಿದು ದೇಶಕ್ಕಾಗಿ ಆಡಿದ್ದರು. 25 ವರ್ಷ ಕ್ರಿಕೆಟ್ ಜೀವನದಲ್ಲಿ ಕಳೆದ ಅವರು ಎಂದೂ ಫಿಟ್ನೆಸ್ ಮತ್ತು ಫಾರ್ಮ್ ಕೊರತೆಯಿಂದ ತಂಡದಿಂದ ಹೊರಗುಳಿದಿರಲಿಲ್ಲ. ಅಲ್ಲದೇ ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕೆಲೆಹಾಕಿದ ಬ್ಯಾಟರ್ ಎಂಬ ಕೀರ್ತಿಯೂ ಇವರಿಗಿದೆ.
'ಹೈದರಾಬಾದ್‌ನಲ್ಲಿರುವುದು ಅಸಾಧಾರಣ ಅನುಭವ. ಇದು ಫಿಟ್ ಇಂಡಿಯಾ, ಆರೋಗ್ಯಕರ ಭಾರತದ ಕುರಿತ ಆಂದೋಲನ. ಸುಮಾರು 8,000 ಜನ ಭಾಗವಹಿಸಿದ್ದಾರೆ. ಇದನ್ನು ಕೇಳಿ ನನಗೆ ಸಂತೋಷವಾಯಿತು. ಏಕೆಂದರೆ ನಾನು ಹೇಳಿದಂತೆ ನಾವು ಹಿಂದೆ ಕುಳಿತು ಇತರರನ್ನು ಮೆಚ್ಚುವ ಪ್ರವೃತ್ತಿಯನ್ನು ಹೊಂದಿದ್ದೇವೆ ಮತ್ತು ನಾವು ಇತರರಿಗಾಗಿ ಚಪ್ಪಾಳೆ ತಟ್ಟಲು ಇಷ್ಟಪಡುತ್ತೇವೆ, ಕ್ರೀಡೆಯನ್ನು ನೋಡಿ ಆನಂದಿಸುತ್ತೇವೆ' ಎಂದು ತೆಂಡೂಲ್ಕರ್ ತಿಳಿಸಿದರು.