ಲಂಡನ್: ಸ್ವಿಸ್ ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದು, ಅಲ್ಲಿನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಬರೋಬ್ಬರಿ 5 ಲಕ್ಷ ಡಾರ್ ಮೊತ್ತವನ್ನು ದೇಣಿಗೆಯಾಗಿ ನೀಡಿ ಉದಾರತೆ ಮೆರೆದಿದ್ದಾರೆ.
ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿರುವ ಪೆಡರರ್ ‘ಉಕ್ರೇನಿನ ಮಕ್ಕಳ ಶಿಕ್ಷಣ ಮುಂದುವರಿಯಲು ನಮ್ಮ ಸಂಸ್ಥೆಯಿಂದ 3.8ಕೋಟಿ ರೂ ದೇಣಿಗೆ (5ಕ್ಷ ಡಾಲರ್) ನೀಡಲಾಗಿದೆ ಎಂದು 20 ಗ್ರ್ಯಾಂಡ್ ಸ್ಲಾಮ್ ವಿಜೇತ ತಿಳಿಸಿದ್ದಾರೆ. ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಸೈನಿಕ ಕಾರ್ಯಾಚರಣೆ ಕೈಗೊಂಡಿದೆ. ಇದರಿಂದ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ.