ಕರ್ನಾಟಕ

karnataka

ETV Bharat / sports

'ಎಲ್ಲ ರಾಷ್ಟ್ರಗಳು ಭಾಗವಹಿಸದ ಒಲಿಂಪಿಕ್ಸ್​ನಲ್ಲಿ ಆಡುವುದೇ ಅರ್ಥಹೀನ' - ಒಲಿಂಪಿಕ್ ಬಗ್ಗೆ ಸುಶೀಲ್ ಕುಮಾರ್ ಹೇಳಿಕೆ

ಎಲ್ಲ ರಾಷ್ಟ್ರಗಳು ಭಾಗವಹಿಸದ ಒಲಿಂಪಿಕ್ಸ್​ನಲ್ಲಿ ಆಡುವುದೇ ಅರ್ಥಹೀನ ಎಂದು ಭಾರತದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಹೇಳಿದ್ದಾರೆ.

Sushil Kumar on Olympics,ಒಲಿಂಪಿಕ್ ಬಗ್ಗೆ ಸುಶೀಲ್ ಕುಮಾರ್ ಹೇಳಿಕೆ
ಕುಸ್ತಿಪಟು ಸುಶೀಲ್ ಕುಮಾರ್

By

Published : Mar 23, 2020, 3:21 PM IST

ಹೊಸದಿಲ್ಲಿ: ವಿಶ್ವದ ಎಲ್ಲ ರಾಷ್ಟ್ರಗಳು ಭಾಗವಹಿಸದ ಒಲಿಂಪಿಕ್ಸ್​ನಲ್ಲಿ ಆಡುವುದೇ ಅರ್ಥಹೀನ ಎಂದು ಭಾರತದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಹೇಳಿದ್ದಾರೆ.

'ಎಲ್ಲರ ಜೀವನದಲ್ಲಿಯೂ ಆರೋಗ್ಯಕ್ಕೆ ಪ್ರಮುಖ ಸ್ಥಾನವಿದೆ. ನಾವೆಲ್ಲ ಸಂಪೂರ್ಣ ಆರೋಗ್ಯವಂತರಾಗಿದ್ದಲ್ಲಿ ಮಾತ್ರ ಚೆನ್ನಾಗಿ ಆಡಬಲ್ಲೆವು. ಹೀಗಾಗಿ ಎಲ್ಲಕ್ಕಿಂತ ಮೊದಲು ಒಗ್ಗಟ್ಟಾಗಿ ಈ ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಹೋರಾಡಬೇಕಿದೆ.' ಎಂದು ಸುಶೀಲ್ ಕುಮಾರ್ ತಿಳಿಸಿದ್ದಾರೆ.

ಕೆನಡಿಯನ್ ಒಲಿಂಪಿಕ್ ಕಮೀಟಿ (ಸಿಓಸಿ) ಮತ್ತು ಕೆನಡಿಯನ್ ಪ್ಯಾರಾ ಒಲಿಂಪಿಕ್ ಕಮೀಟಿಗಳು (ಸಿಪಿಸಿ) 2020 ರ ಬೇಸಿಗೆ ಒಲಿಂಪಿಕ್ಸ್​ಗೆ ತಮ್ಮ ತಂಡಗಳನ್ನು ಕಳುಹಿಸುತ್ತಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಸುಶೀಲ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬರುವ ನಾಲ್ಕು ವಾರಗಳಲ್ಲಿ ಒಲಿಂಪಿಕ್ಸ್​ ಬಗ್ಗೆ ಸ್ಪಷ್ಟ ನಿಲುವು ತಳೆಯುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಕಮೀಟಿ (ಐಓಸಿ) ಘೋಷಿಸಿದೆ. ಆದಾಗ್ಯೂ 'ಕ್ರೀಡಾಕೂಟವನ್ನೇ ರದ್ದುಗೊಳಿಸುವ' ಯಾವುದೇ ಪ್ರಸ್ತಾವನೆ ತನ್ನ ಮುಂದಿಲ್ಲ ಎಂದು ಐಓಸಿ ಸ್ಪಷ್ಟಪಡಿಸಿದೆ.

ABOUT THE AUTHOR

...view details