ಕರ್ನಾಟಕ

karnataka

ETV Bharat / sports

ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 2: ಹಿಮಾ ದಾಸ್ ಹಿಂದಿಕ್ಕಿದ ಅರ್ಚನಾ, ಜಿನ್ಸನ್ ಜಾನ್ಸನ್​ಗೆ 1500 ಮೀ ಓಟದಲ್ಲಿ ಚಿನ್ನ - ​ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ

ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 2ರಲ್ಲಿ ಐದು ಕ್ರೀಡಾ ಪಟುಗಳು ಏಷ್ಯನ್​ ಗೇಮ್ಸ್​ ಕ್ರೀಡಾಕೂಟಕ್ಕೆ ಆಯ್ಕೆಯಾದರು.

Indian Grand Prix 2
ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 2

By

Published : Mar 28, 2023, 3:21 PM IST

ತಿರುವನಂತಪುರಂ (ಕೇರಳ): ಕೇರಳದ ತಿರುವನಂತಪುರದಲ್ಲಿ ಸೋಮವಾರ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 2 2023 ಅಥ್ಲೆಟಿಕ್ಸ್ ಕೂಟದಲ್ಲಿ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಜಿನ್ಸನ್ ಜಾನ್ಸನ್ ಒಂದು ವರ್ಷದ ತನ್ನ ಮೊದಲ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ 1500 ಮೀ ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಇದರಿಂದ ಜಿನ್ಸನ್ ಜಾನ್ಸನ್ ಈ ವರ್ಷದ ಕೊನೆಯಲ್ಲಿ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. 1500 ಮೀಟರ್ ಓಟವನ್ನು 3:44.52 ಮುಗಿಸಿ ಜಿನ್ಸನ್ ಜಾನ್ಸನ್ ಗೆಲುವು ದಾಖಲಿಸಿದರು. 3:47:84 ನಿಮಿಷದ ಒಳಗೆ 1500 ಮೀಟರ್ ಓಟ ಮುಕ್ತಾಯಗೊಳಿಸಿದಲ್ಲಿ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗುವ ಮಾನದಂಡವನ್ನು ​ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ನಿಗದಿ ಮಾಡಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಜಾನ್ಸನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ರಾಷ್ಟ್ರೀಯ ದಾಖಲೆ ಜಾನ್ಸನ್ ಸ್ನಾಯುರಜ್ಜು ನೋವಿನ ಸಮಸ್ಯೆಯಿಂದ ಪುನರ್ವಸತಿಗೆ ಒಳಗಾಗಿದ್ದರು. ಅಕ್ಟೋಬರ್ 2019 ರಲ್ಲಿ ನಡೆದಿದ್ದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಕಳೆದ ವರ್ಷ ಫೆಡರೇಶನ್ ಕಪ್​ನ್ನು ಜಾನ್ಸನ್​ ಗೆದ್ದಿದ್ದರು. ಇದು ಮೊದಲ ಫೆಡರೇಶನ್ ಕಪ್​ನ ಗೆಲುವಾಗಿತ್ತು.

3:47.00 ಸಮಯ ರಾಹುಲ್ 1500 ಮೀಟರ್​ ಓಟ ಪೂರ್ಣ ಮಾಡಿ ದ್ವಿತೀಯ ಸ್ಥಾನ ಪಡೆದರು. ಈ ಮೂಲಕ ರಾಹುಲ್​ ಸಹ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು. 3:48.57 ನಿಮಿಷದಲ್ಲಿ ಓಟ ಮುಗಿಸಿದ ಪ್ರಕಾಶ ಬಾಳು ಕಂಚು ಗೆದ್ದರು.

ಏಷ್ಯನ್​ ಗೇಮ್ಸ್​ಗೆ ಆಯ್ಕೆಯಾದ ಅರ್ಚನಾ:ಅರ್ಚನಾ ಸುಸೀಂದ್ರನ್ ಮಹಿಳೆಯರ 100 ಮತ್ತು 200 ಮೀಟರ್ ಓಟದಲ್ಲಿ ಜಯ ಗಳಿಸಿದರು. ಅವರು 100 ಮೀಟರ್​ ಓಟವನ್ನು 11.52 ಸಮಯದಲ್ಲಿ ಪೂರ್ಣಗೊಳಿಸಿದರು. ಹಿಮಾ ದಾಸ್ (11.74) ಮತ್ತು ಎಟಿ ದಾನೇಶ್ವರಿ (11.80) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅರ್ಚನಾ ಸುಸೀಂದ್ರನ್ 200 ಮೀಟರ್​ ಓಟವನ್ನು 23.21 ಸೆಕೆಂಡ್​ನಲ್ಲಿ ಪೂರೈಸಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು. ಏಷ್ಯನ್ ಕ್ರೀಡಾಕೂಟದ ಪ್ರವೇಶಕ್ಕೆ 23.43 ಸೆಕೆಂಡನ್ನು ಮಾನದಂಡವಾಗಿ ನಿಗದಿಪಡಿಸಲಾಗಿತ್ತು.

ಮತ್ತೊಬ್ಬ ಏಷ್ಯನ್ ಗೇಮ್ಸ್ ವಿಜೇತ ತಜಿಂದರ್‌ಪಾಲ್ ಸಿಂಗ್ ತೂರ್ ಅವರು ತಮ್ಮ ನೆಚ್ಚಿನ ಶಾಟ್‌ಪುಟ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರು. ಇಂಡಿಯನ್ ಓಪನ್ ಥ್ರೋಸ್ ಟೂರ್ನಮೆಂಟ್‌ನಲ್ಲಿ ಅತ್ಯುತ್ತಮವಾದ 19.95 ಮೀ ಎಸೆತದೊಂದಿಗೆ, ತಜಿಂದರ್‌ಪಾಲ್ ಸಿಂಗ್ ತೂರ್ ಈಗಾಗಲೇ ಏಷ್ಯನ್ ಗೇಮ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದರು. ತಿರುವನಂತಪುರಂನಲ್ಲಿ ತೂರ್ ತನ್ನ ಎರಡನೇ ಪ್ರಯತ್ನದಲ್ಲಿ 19.76 ಮೀಟರ್‌ಗಳ ವೈಯಕ್ತಿಕ ಅತ್ಯುತ್ತಮ ದೂರವನ್ನು ದಾಖಲು ಮಾಡಿ ಚಿನ್ನದ ಪದಕವನ್ನು ಗೆದ್ದರು.

ಶಾಟ್‌ಪುಟ್​ ಥ್ರೋನಲ್ಲಿ ಕರಣ್ವೀರ್ ಸಿಂಗ್ 19.17 ಮೀಟರ್​ ದೂರ ಹಾಗೂ ಸಾಹಿಬ್ ಸಿಂಗ್ 19.07 ಮೀ ದೂರ ಎಸೆದು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿಗೆ ಮುತ್ತಿಟ್ಟರು. ಏಷ್ಯನ್​ ಗೇಮ್ಸ್​ಗೆ 19 ಮೀಟರ್​ ದಾಟುವುದು ಮಾನದಂಡವಾಗಿದ್ದರಿಂದ, ಮೂರು ಪದಕ ವಿಜೇತರು ಏಷ್ಯನ್​ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 3 ಏಪ್ರಿಲ್ 2 ರಂದು ನಡೆಯಲಿದೆ ಮತ್ತು ನಾಲ್ಕನೇಯದ್ದು ಏಪ್ರಿಲ್ 10 ರಂದು ನಡೆಯಲಿದೆ. ಎರಡೂ ಸ್ಪರ್ಧೆಗಳು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ.

ಇದನ್ನೂ ಓದಿ:ಚೆಪಾಕ್​ ಮೈದಾನದಲ್ಲಿ ತಲೈವಾಗೆ ಭರ್ಜರಿ ಸ್ವಾಗತ.. ಕಿವಿಗಡಚಿಕ್ಕಿದ ಧೋನಿ ಹರ್ಷೋದ್ಘಾರ

ABOUT THE AUTHOR

...view details