ಸೋಫಿಯಾ: ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಫೈನಲ್ ತಲುಪುವ ಮೂಲಕ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಭಾರತದ ಮಹಿಳಾ ಕುಸ್ತಿಪಟು ಸೀಮಾ ಬಿಸ್ಲಾ (50 ಕೆಜಿ) ಮತ್ತು ಸುಮಿತ್ ಮಲಿಕ್ (125 ಕೆಜಿ) ಅವರನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಅಭಿನಂದಿಸಿದ್ದಾರೆ.
" ಬಲ್ಗೇರಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಪಡೆದ ಕುಸ್ತಿಪಟು ಸೀಮಾಬಿಸ್ಲಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇವರು ಟೋಕಿಯೋಗೆ ಅರ್ಹತೆ ಪಡೆದ 8 ನೇ ಭಾರತೀಯ ಕುಸ್ತಿಪಟು. ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಶ್ರಮಿಸಿದ್ದಕ್ಕಾಗಿ ನಮ್ಮ ಎಲ್ಲ ಕ್ರೀಡಾಪಟುಗಳ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ" ಎಂದು ಕಿರಣ್ ರಿಜಿಜು ಅಭಿನಂದಿಸಿದ್ದಾರೆ.