ದೋಹಾ:ಕತಾರ್‌ನಲ್ಲಿ ನಡೆಯುತ್ತಿರುವ 22ನೇ ಫಿಫಾ ವಿಶ್ವಕಪ್ 2022ರ ನಾಕೌಟ್ ಪಂದ್ಯಗಳು ಆರಂಭಗೊಂಡಿವೆ. 32 ತಂಡಗಳ ಪೈಕಿ 16 ತಂಡಗಳು ನಾಕೌಟ್ ಹಂತ ತಲುಪಿದ್ದು, ಗೆದ್ದ ತಂಡ ಕೊನೆಯ ಎಂಟರ ಘಟ್ಟ ತಲುಪಲಿದೆ. ವಿಶ್ವಕಪ್‌ನಲ್ಲಿ ಫ್ರಾನ್ಸ್‌ನ ಕೈಲಿಯನ್ ಬಪ್ಪೆ 5 ಗೋಲುಗಳೊಂದಿಗೆ ಗೋಲ್ಡನ್ ಬೂಟ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮೂರು ಗೋಲು ಭಾರಿಸಿದ ಆಟಗಾರರು
ಮಾರ್ಕಸ್ ರಾಶ್‌ಫೋರ್ಡ್, ಇಂಗ್ಲೆಂಡ್
ಲಿಯೋನೆಲ್ ಮೆಸ್ಸಿ, ಅರ್ಜೆಂಟೀನಾ
ಕೋಡಿ ಗಪ್ಪೋ, ಹಾಲೆಂಡ್
ಎನರ್ ವೇಲೆನ್ಸಿಯಾ, ಈಕ್ವೆಡಾರ್
ಅಲ್ವಾರೊ ಮೊರಾಟೊ, ಸ್ಪೇನ್
ಎರಡು ಗೋಲು ಗಳಿಸಿದ ಆಟಗಾರರು
ಒಲಿವಿಯರ್ ಗಿರೌಡ್, ಫ್ರಾನ್ಸ್
ಫೆರಾನ್ ಟೊರೆಸ್, ಸ್ಪೇನ್
ಬುಕಾಯೋ ಸಕಾ, ಇಂಗ್ಲೆಂಡ್
ಮೆಹದಿ ತರೇಮಿ, ಇರಾನ್
ಆಂಡ್ರೆಜ್ ಕ್ರಾಮರಿಕ್, ಕ್ರೊಯೇಷಿಯಾ
ರಿಚರ್ಡ್ಸನ್, ಬ್ರೆಜಿಲ್
ಚೋ ಗುಯೆ-ಸಂಗ್, ದಕ್ಷಿಣ ಕೊರಿಯಾ
ಮೊಹಮ್ಮದ್ ಕುದುಸ್, ಘಾನಾ
ರಿಟ್ಸು ಡಾನ್, ಜಪಾನ್
ಬ್ರೂನೋ ಫರ್ನಾಂಡಿಸ್, ಪೋರ್ಚುಗಲ್
ನಿಕ್ಲಾಸ್ ಫುಲ್ಕ್ರುಗ್, ಜರ್ಮನಿ
ಕೈ ಹಾವರ್ಟ್ಜ್, ಜರ್ಮನಿ
ಅಲೆಕ್ಸಾಂಡರ್ ಮಿಟ್ರೋವಿಕ್, ಸೆರ್ಬಿಯಾ
ಬ್ರೈಲ್ ಎಂಬೋಲೋ, ಸ್ವಿಟ್ಜರ್ಲೆಂಡ್
ಜಾರ್ಜಿಯೋನ್ ಡೆ ಅರಾಸ್ಕೇಟಾ, ಉರುಗ್ವೆ
ವಿನ್ಸೆಂಟ್ ಅಬೂಬಕರ್, ಕ್ಯಾಮರೂನ್
ಗೋಲ್ಡನ್ ಬೂಟ್ ಪ್ರಶಸ್ತಿ ಎಂದರೇನು?
ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಭಾರಿಸಿದ ಆಟಗಾರನಿಗೆ ನೀಡಲಾಗುತ್ತದೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಆರು ಬಾರಿ ಗೊಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ.
ಮೆಸ್ಸಿ ಪ್ರಸ್ತುತ ಫಿಪಾ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಮೂರು ಗೋಲುಗಳನ್ನು ಗಳಿಸಿದ್ದಾರೆ. 2018ರಲ್ಲಿ ಇಂಗ್ಲೆಂಡ್‌ನ ಹ್ಯಾರಿ ಕೇನ್ ಆರು ಗೋಲುಗಳನ್ನು ಗಳಿಸಿ ಈ ಪ್ರಶಸ್ತಿಯನ್ನು ಪಡೆದಿದ್ದರು.
ಇದ್ನನೂ ಓದಿ:ವ್ಯಾನ್ ಗಾಲ್ರಂತಹ ಕೋಚ್ ಇರುವ ತಂಡದ ವಿರುದ್ಧ ಆಡುವುದು ಗೌರವ: ಅರ್ಜೆಂಟೀನಾ ಮ್ಯಾನೇಜರ್ ಸ್ಕಾಲೋನಿ