ನವದೆಹಲಿ :ಟೋಕಿಯೋ ಒಲಿಂಪಿಕ್ಸ್ ಬೌಂಡ್ ಡಿಸ್ಕಸ್ ಎಸೆತಗಾರ್ತಿ ಕಮಲ್ಪ್ರೀತ್ ಕೌರ್ ಇಂಡಿಯನ್ ಗ್ರ್ಯಾಂಡ್ ಫ್ರಿಕ್ಸ್ 4ನಲ್ಲಿ ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 22 ವರ್ಷದ ಕೌರ್ ಪಟಿಯಾಲದಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 66.59 ಮೀಟರ್ ಎಸೆದಿದ್ದಾರೆ. ಅವರ ಹಿಂದೆ 2021ರ ಫೆಡ್ಕಪ್ನಲ್ಲಿ 65.06 ಮೀಟರ್ ಎಸೆದು ದಾಖಲೆ ಬರೆದಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ಶಾಟ್ಪುಟ್ ಎಸೆತಗಾರ್ತಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಕಮಲ್ಪ್ರೀತ್ ಡಿಸ್ಕಸ್ ಥ್ರೋನಲ್ಲಿ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅವರು ತಮ್ಮ ಮೊದಲ ಅಧಿಕೃತ ಎಸೆತದಲ್ಲಿ ಒಲಿಂಪಿಕ್ಸ್ ಅರ್ಹತೆಗೆ ನಿಗದಿ ಮಾಡಲಾಗಿದ್ದ 63.05 ಮೀಟರ್ ದೂರವನ್ನು ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 9 ವರ್ಷಗಳ ಹಿಂದೆ ಕಷ್ಣಾ ಪೂನಿಯಾ ಅವರ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಬ್ರೇಕ್ ಮಾಡಿದ್ದರು.