ನವದೆಹಲಿ:ಕ್ರೀಡೆಗಳು ಒಂದೆಡೆ ಮನರಂಜನೆಯ ಭಾಗವಾದರೆ, ಅಲ್ಲಿಯೂ ನೋಡುಗನಿಗೆ ಅರಿವಾಗದಂತೆ ಅನೇಕ ಭ್ರಷ್ಟಾಚಾರಗಳು ನಡೆದಿರುತ್ತವೆ. ಪಂದ್ಯ ಫಲಿತಾಂಶದ ಹಿಂದೆ ಯಾವುದೋ ಕಾಣದ ಕೈ ಎಲ್ಲಿಂದಲೂ ನಿಯಂತ್ರಿಸಿರುತ್ತದೆ. ನೋಡು ಪ್ರೇಕ್ಷಕ ಇದಾವುದರ ಅರಿವು ಇರುವುದಿಲ್ಲ ಅವನು ಮನರಂಜನೆಯ ಭಾಗವಾಗಿ ಮಾತ್ರ ಕ್ರೀಡೆಯನ್ನು ನೋಡುತ್ತಿರುತ್ತಾನೆ. ಆದರೆ ಈ ಮನರಂಜನೆಯೂ ಮೋಸದ ಜಾಲದಲ್ಲಿದೆ.
ಈ ಬಗ್ಗೆ ವರದಿಯೊಂದು ಬಹಿರಂಗವಾಗಿದೆ. 2022ರಲ್ಲಿ ಐಪಿಎಲ್ ಮತ್ತು ಟಿ20 ಕ್ರಿಕೆಟ್‌ನ ಹಲವು ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವರದಿಯಲ್ಲಿ ಕ್ರಿಕೆಟ್ ಬಗ್ಗೆ ಮಾತ್ರ ಇಲ್ಲ, ಇದಲ್ಲದೇ ಫುಟ್ಬಾಲ್ ಮತ್ತು ಟೆನಿಸ್ ಪಂದ್ಯಗಳಲ್ಲೂ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. 'ಸ್ಪೋರ್ಟ್‌ಡಾರ್ ಇಂಟೆಗ್ರಿಟಿ ಸರ್ವಿಸಸ್' ವರದಿಯನ್ನು ನೀಡಿದೆ. ಈ ವಿಷಯ ಎಷ್ಟು ಸತ್ಯ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ.
'ಸ್ಪೋರ್ಟ್‌ಡಾರ್ ಇಂಟೆಗ್ರಿಟಿ ಸರ್ವಿಸಸ್' ಎಂಬುದು ಅಂತಾರಾಷ್ಟ್ರೀಯ ಕ್ರೀಡಾ ತಜ್ಞರ ತಂಡವಾಗಿದ್ದು, ಕ್ರೀಡೆಗಳಲ್ಲಿನ ಬೆಟ್ಟಿಂಗ್ ಮತ್ತು ಇತರ ರೀತಿಯ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತದೆ. ಈ ಸಂಸ್ಥೆಯು ತನ್ನ 28 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 2022 ರಲ್ಲಿ 92 ದೇಶಗಳಲ್ಲಿ ಆಡಿದ ಪಂದ್ಯಾವಳಿಗಳಲ್ಲಿ ಸುಮಾರು 1,212 ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಯುಪಿ ವಿರುದ್ಧ ಗೆದ್ದು ಫೈನಲ್ ತಲುಪಿದ ಮುಂಬೈ ಇಂಡಿಯನ್ಸ್: ನಾಳೆ ಅಂತಿಮ ಕದನ
ಫುಟ್ಬಾಲ್ಗೆ ಅಗ್ರಸ್ಥಾನ:ಸ್ಪೋರ್ಟ್‌ಡಾರ್ ಇಂಟೆಗ್ರಿಟಿ ಸರ್ವಿಸಸ್ ಪ್ರಕಾರ, ಅಂತಾರಾಷ್ಟ್ರೀಯ ಫುಟ್ಬಾಲ್ನ 775 ಪಂದ್ಯದಲ್ಲಿ ಬೆಟ್ಟಿಂಗ್ ನಡೆದಿರುವ ಬಗ್ಗೆ ವರದಿ ಹೇಳುತ್ತಿದೆ. ಬ್ಯಾಸ್ಕೆಟ್‌ಬಾಲ್‌ನ ಸುಮಾರು 220 ಅಂತರಾಷ್ಟ್ರೀಯ ಪಂದ್ಯಗಳು ವರದಿಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದಲ್ಲದೇ ಲಾನ್ ಟೆನಿಸ್ನ ಸುಮಾರು 75 ಪಂದ್ಯಗಳನ್ನೂ ಈ ವರದಿಯಲ್ಲಿ ಸೇರಿಸಲಾಗಿದೆ.
13 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಫಿಕ್ಸಿಂಗ್!:ಸ್ಪೋರ್ಟ್‌ಡಾರ್ ಇಂಟೆಗ್ರಿಟಿ ಸರ್ವಿಸಸ್ ತನ್ನ ವರದಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಬೆಟ್ಟಿಂಗ್ ಬಗ್ಗೆಯೂ ಹೇಳಿದೆ. ಈ ವರದಿಯ ಪ್ರಕಾರ 2022ರಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸುಮಾರು 13 ಪಂದ್ಯಗಳ ಫಲಿತಾಂಶದಲ್ಲಿ ಫಿಕ್ಸಿಂಗ್ ಶಂಕೆ ವ್ಯಕ್ತವಾಗಿದೆ. ಮ್ಯಾಚ್ ಫಿಕ್ಸಿಂಗ್ ವರದಿಯಲ್ಲಿ ಕ್ರಿಕೆಟ್ 6 ನೇ ಸ್ಥಾನದಲ್ಲಿದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ 13 ಪಂದ್ಯಗಳಲ್ಲಿ ಫಿಕ್ಸಿಂಗ್ ದೊಡ್ಡ ಸಂಖ್ಯೆಯಾಗಿದೆ. ಆದರೆ, ಈ ವರದಿಯ ಬಗ್ಗೆ ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಐಪಿಎಲ್ಗೆ ತಟ್ಟಿದ್ದ ಬೆಟ್ಟಿಂಗ್ ಕರಾಳ ನೆರಳು:ಭಾರತದಲ್ಲಿ ನಡೆಯುವ ಟಿ20 ಕ್ರಿಕೆಟ್ ಲೀಗ್ಗೆ ಬೆಟ್ಟಿಂಗ್ನ ಕರಿನೆರಳು ಬಿದ್ದಿತ್ತು. ಇದರಿಂದ ಎರಡು ತಂಡಗಳು ಐಪಿಎಲ್ನಿಂದ ಎರಡು ವರ್ಷ ಬ್ಯಾನ್ ಕೂಡಾ ಆಗಿತ್ತು. 2019ರ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಬೆಟ್ಟಿಂಗ್ನಲ್ಲಿ ಪಾಲ್ಗೊಂಡಿದ್ದವು ಎಂದು ಎರಡು ವರ್ಷ ಬ್ಯಾನ್ ಆಗಿದ್ದವು.
ಇದನ್ನೂ ಓದಿ:"ರಿಷಬ್ ಜೊತೆಗಿನ ಕ್ಷಣಗಳು ಮಿಸ್ ಆಗುತ್ತವೆ": ಡೆಲ್ಲಿ ಕ್ಯಾಪಿಟಲ್ಸ್ ಪಾಳಯ ಸೇರಿದ ನಾಯಕ ವಾರ್ನರ್ ಮಾತು