ನವದೆಹಲಿ:ಭಾರತದ ಭರವಸೆಯ ಕುಸ್ತಿಪಟು ಭಜರಂಗ್ ಪೂನಿಯಾ ಸಾಯ್ ಏರ್ಪಡಿಸಿರುವ ತರಬೇತಿ ಹಾಗೂ ಶಿಬಿರದ ಬಗ್ಗೆ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಟಗಾರರ ಮಧ್ಯೆ ಸ್ಪರ್ಧೆ ಇದ್ದಾಗ ಮಾತ್ರ ಹೊಸ ವಿಚಾರಗಳ ಬಗ್ಗೆ ಉತ್ತಮ ಆಲೋಚನೆಗಳು ಹುಟ್ಟುತ್ತವೆ ಎಂದು ಎಂದು ಹೇಳಿದ್ದಾರೆ.
ಪ್ರಸ್ತುತ ಸೋನೆಪತ್‌ನಲ್ಲಿರುವ ಸಾಯ್ನ ಎನ್‌ಸಿಒಇನಲ್ಲಿ ಫ್ರೀಸ್ಟೈಲ್ ಮತ್ತು ಗ್ರೀಕೋ-ರೋಮನ್ ವಿಭಾಗದ ಭಾರತೀಯ ಪುರುಷರ ಕುಸ್ತಿ ಶಿಬಿರ ಪ್ರಗತಿಯಲ್ಲಿದೆ. ಶಿಬಿರ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿದ್ದು, 14 ದಿನಗಳ ಕ್ವಾರಂಟೈನ್ ನಂತರ ಕುಸ್ತಿಪಟುಗಳು ತಮ್ಮ ತರಬೇತಿಯನ್ನು ಪ್ರಾರಂಭಿಸಿದ್ದಾರೆ.
" ನಾವು ತರಬೇತಿಗೆ ಮರಳಿರುವುದು ತುಂಬಾ ಒಳ್ಳೆಯದು, ಇದರರ್ಥ ನಾವೆಲ್ಲಾ ಲಯದಲ್ಲಿಲ್ಲ ಎಂದಲ್ಲ, ಲಾಕ್‌ಡೌನ್ ಸಮಯದಲ್ಲಿ ನಾವು ನಮ್ಮ ಮನೆಗಳಲ್ಲಿ ತರಬೇತಿ ಪಡೆದಿದ್ದೇವೆ. ಆದರೆ ಶಿಬಿರದಲ್ಲಿ ಒಬ್ಬರು ಏನು ಮಾಡಬಹುದೊ ಅದನ್ನ ನಾವು ಮನೆಯಲ್ಲಿ ನಡೆಸುವ ತರಬೇತಿಯೊಂದಿಗೆ ಹೋಲಿಸಲಾಗುವುದಿಲ್ಲ " ಎಂದು ಸಾಯ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಪ್ರಕಾರ ಭಜರಂಗ್ ತಿಳಿಸಿದ್ದಾರೆ.