ಕರ್ನಾಟಕ

karnataka

ETV Bharat / sports

ಏಷ್ಯನ್ ಚಾಂಪಿಯನ್​ಶಿಪ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಥಾಪಾ, ಹುಸಾಮುದ್ದೀನ್ - ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್​

ಸೋಮವಾರ ನಡೆದ 56 ಕೆಜಿ ವಿಭಾಗದ ಬೌಟ್‌ನಲ್ಲಿ ಹುಸಾಮುದ್ದೀನ್ ಕಜಕಸ್ತಾನದ ಮಕಮೂದ್ ಸಬಿರ್‌ಖಾನ್ ಎದುರು 5-0 ಯಲ್ಲಿ ಜಯಗಳಿಸಿದರೆ, ಹಿಂದಿನ 4 ಬಾರಿ ಪದಕ ಪಡೆದಿರುವ ಶಿವ ಥಾಫಾ 5-0 ಯಲ್ಲಿ ಕಜಕಸ್ತಾನದ ಡಿಮಿಟ್ರಿ ಪುಚಿನ್​ರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಏಷ್ಯನ್ ಚಾಂಪಿಯನ್​ಶಿಪ್
ಶಿವ ಥಾಪ

By

Published : May 25, 2021, 6:02 PM IST

ದುಬೈ:ಮೊಹಮ್ಮದ್ ಹುಸಾಮುದ್ದೀನ್ ಮತ್ತು ಶಿವಾ ಥಾಪಾ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ನಡೆದ 56 ಕೆಜಿ ವಿಭಾಗದ ಬೌಟ್‌ನಲ್ಲಿ ಹುಸಾಮುದ್ದೀನ್ ಕಜಕಸ್ತಾನದ ಮಕಮೂದ್ ಸಬಿರ್‌ಖಾನ್ ಎದುರು 5-0 ಯಲ್ಲಿ ಜಯಗಳಿಸಿದರೆ, ಹಿಂದಿನ 4 ಬಾರಿ ಪದಕ ಪಡೆದಿರುವ ಶಿವ ಥಾಫಾ 5-0 ಯಲ್ಲಿ ಕಜಕಸ್ತಾನದ ಡಿಮಿಟ್ರಿ ಪುಚಿನ್ ಅವ​ರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಶಿವಾ ಥಾಪಾ ತಮ್ಮ ಮುಂದಿನ ಪಂದ್ಯದಲ್ಲಿ ಕುವೈತ್​ನ ನಾದರ್ ಓಡಾಹ್ ಅವರನ್ನು ಇಂದು ಸಂಜೆ ಎದುರಿಸಲಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿರುವ ಹುಸಾಮುದ್ದೀನ್ ಕ್ವಾರ್ಟರ್ ಫೈನಲ್​ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಉಜ್ಬೆಕಿಸ್ತಾನ ಮಿರಾಜಿಜ್‌ಬೆಕ್‌ ಮಿರ್ಜಹಲಿಲೊವ್ ಅವರನ್ನು ಎದುರಿಸಲಿದ್ದಾರೆ.

ಇವರಿಬ್ಬರ ಜೊತೆಗೆ ಮಂಗಳವಾರ ಸಂಜೀತ್ (91 ಕೆಜಿ) ಮತ್ತು ಮಹಿಳೆಯರ ವಿಭಾಗದಲ್ಲಿ ಸಿಮ್ರಾನ್‌ಜೀತ್ ಕೌರ್‌ (60 ಕೆಜಿ), ಸಾಕ್ಷಿ (54 ಕೆಜಿ), ಜಾಸ್ಮಿನ್ (57 ಕೆಜಿ) ಕಣಕ್ಕಿಳಿಯಲಿದ್ದಾರೆ.

ಇದನ್ನು ಓದಿ:ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಆರಂಭವಾಗಲಿವೆ 143 ಖೇಲೋ ಇಂಡಿಯಾ ಕೇಂದ್ರಗಳು

ABOUT THE AUTHOR

...view details