ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಂಜಾಬ್‌ನ ಮೊಹಾಲಿ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವನ್ನು ಆಯೋಜಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಪಂಜಾಬ್ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀತ್ ಹೇಯರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಐಸಿಸಿ ಎಲ್ಲಾ ಸ್ಥಳಗಳನ್ನು ಅನುಮೋದಿಸಬೇಕು, ಸ್ಥಳಗಳನ್ನು ಆಯ್ಕೆ ಮಾಡುವಾಗ ನಮಗೆ ಐಸಿಸಿಯ ಒಪ್ಪಿಗೆ ಬೇಕು. ಜೊತೆಗೆ, ಮೊಹಾಲಿಯ ಕ್ರೀಡಾಂಗಣವು ಐಸಿಸಿಯ ಮಾನದಂಡಗಳನ್ನು ಪೂರೈಸಿಲ್ಲ" ಎಂದು ಶುಕ್ಲಾ ತಿರುಗೇಟು ನೀಡಿದ್ದಾರೆ.
"ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಪಂದ್ಯಾವಳಿಯಲ್ಲಿ ಹಲವು ಕೇಂದ್ರಗಳು ಮತ್ತು ಪ್ರದೇಶಗಳನ್ನು ಸೇರಿಸಲಾಗಿದೆ. ಪಂಜಾಬ್‌ನ ಮೊಹಾಲಿಗೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವೂ ಸಿಗದಿರಲು ಸದ್ಯದ ಪರಿಸ್ಥಿತಿಯೇ ಕಾರಣ. ಮೊಹಾಲಿಯ ಕ್ರೀಡಾಂಗಣವು ICC ಯ ಮಾನದಂಡಗಳನ್ನು ಪೂರೈಸಲಿಲ್ಲ, ಪಂದ್ಯಾವಳಿಯ ಸ್ಥಳಗಳನ್ನು ಅಂತಿಮಗೊಳಿಸುವಲ್ಲಿ ಐಸಿಸಿಯ ಅನುಮೋದನೆಯು ನಿರ್ಣಾಯಕವಾಗಿದೆ, ಅದು ಬಿಸಿಸಿಐ ಕೈಯಲ್ಲಿಲ್ಲ" ಎಂದಿದ್ದಾರೆ.
ಇದನ್ನೂ ಓದಿ :ICC rejects Pakistan request: ಪಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ.. ಅತಂತ್ರ ಸ್ಥಿತಿಯಲ್ಲಿ ಪಾಕ್ ಪಂದ್ಯವಾಡುತ್ತಾ?
"ಈ ಬಾರಿ ಮೆಗಾ ಕ್ರಿಕೆಟ್ ಈವೆಂಟ್‌ಗೆ 12 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಬಾರಿಗೆ ವಿಶ್ವಕಪ್‌ಗೆ 12 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಹಿಂದಿನ ವಿಶ್ವಕಪ್‌ನಲ್ಲಿ ಇಷ್ಟು ಸ್ಥಳಗಳನ್ನು ಆಯ್ಕೆ ಮಾಡಿರಲಿಲ್ಲ. ಈ 12 ಸ್ಥಳಗಳ ಪೈಕಿ ಅಭ್ಯಾಸ ಪಂದ್ಯಗಳು ತಿರುವನಂತಪುರ ಮತ್ತು ಗುವಾಹಟಿಯಲ್ಲಿ ನಡೆಯಲಿದ್ದು, ಉಳಿದ ಸ್ಥಳಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ದಕ್ಷಿಣ ವಲಯದಿಂದ ನಾಲ್ವರು, ಕೇಂದ್ರ ವಲಯದಿಂದ ಒಬ್ಬರು, ಪಶ್ಚಿಮ ವಲಯದಿಂದ ಇಬ್ಬರು, ಉತ್ತರ ವಲಯದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ದೆಹಲಿ ಮತ್ತು ಧರ್ಮಶಾಲಾದಲ್ಲಿಯೂ ಪಂದ್ಯಗಳು ನಡೆಯಲಿವೆ. ದ್ವಿಪಕ್ಷೀಯ ಸರಣಿ ಪಂದ್ಯಗಳನ್ನು ಮೊಹಾಲಿಗೆ ನೀಡಲಾಗುವುದು ಮತ್ತು ಯಾವುದೇ ತಾರತಮ್ಯವಿಲ್ಲ" ಎಂದು ಶುಕ್ಲಾ ಹೇಳಿದರು.
ಇದನ್ನೂ ಓದಿ :Cricket World Cup 2023: ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರಿ ಕುತೂಹಲದ ಪಂದ್ಯಗಳು ಯಾವುವು ಗೊತ್ತೇ? ನೋಡಲು ಮಿಸ್ ಮಾಡದಿರಿ!
ಏನಿದು ಆರೋಪ?: ಪಂಜಾಬ್ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಅವರು ಡಬ್ಲ್ಯುಸಿ ವೇಳಾಪಟ್ಟಿಯಿಂದ ಮೊಹಾಲಿಯನ್ನು ಹೊರಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗೂ ರಾಜಕೀಯ ಹಸ್ತಕ್ಷೇಪದಿಂದಾಗಿ ಪಂದ್ಯಾವಳಿಯ ಆತಿಥೇಯ ನಗರಗಳ ಪಟ್ಟಿಯಿಂದ ಮೊಹಾಲಿಯನ್ನು ಹೊರಗಿಡಲಾಗಿದೆ, ಪಂಜಾಬ್ ಸರ್ಕಾರ ಈ ವಿಚಾರವನ್ನು ಬಿಸಿಸಿಐಗೆ ತಿಳಿಸಲಿದೆ ಎಂದು ಹೇಳಿಕೆ ನೀಡಿದ್ದರು.
ಏಕ ದಿನ ವಿಶ್ವ ಕಪ್ನ ಆತಿಥ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಐಸಿಸಿಯು ಜೂನ್ 27ರಂದು ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಭಾರತ ತಂಡಕ್ಕೆ ವಿಶ್ವ ಕಪ್ ಗೆಲ್ಲುವುದಕ್ಕೆ ಸಿದ್ಧವಾಗುತ್ತಿದೆ. ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳ ಉತ್ಸಾಹ ಸಹ ಹೆಚ್ಚಾಗಿದೆ. ಇನ್ನು 2011ರಲ್ಲಿ ಭಾರತ ತಂಡ ಏಕ ದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು. ಆ ವರ್ಷ ಪ್ರಶಸ್ತಿ ಗೆದ್ದುಕೊಂಡಿತ್ತು.
ಇದನ್ನೂ ಓದಿ :World Cup 2023: ವಿಶ್ವಕಪ್‌ಗೆ ಇನ್ನು ಮೂರೇ ತಿಂಗಳು.. ಇದೇ 27ಕ್ಕೆ ವೇಳಾಪಟ್ಟಿ ಪ್ರಕಟ