ಕರ್ನಾಟಕ

karnataka

ETV Bharat / sports

ಕೋವಿಡ್​ನಿಂದ ಮೃತಪಟ್ಟ ಹಾಕಿ ಲೆಜೆಂಡ್​ಗಳ ಕುಟುಂಬಕ್ಕೆ 5 ಲಕ್ಷ ನೆರವು ಘೋಷಿಸಿದ ಕ್ರೀಡಾ ಸಚಿವ

ಕೌಶಿಕ್ ಮತ್ತು ರವೀಂದರ್​ ಪಾಲ್ ಸಿಂಗ್ 1980ರ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದರು. ಅವರು ಇತ್ತೀಚೆಗೆ ಕೋವಿಡ್ 19 ವೈರಸ್​ಗೆ ತುತ್ತಾಗಿ ನಿಧನರಾಗಿದ್ದರು.

ಕಿರಣ್ ರಿಜಿಜು
ಕಿರಣ್ ರಿಜಿಜು

By

Published : May 13, 2021, 5:32 PM IST

Updated : May 13, 2021, 7:33 PM IST

ನವದೆಹಲಿ:ಕೋವಿಡ್​ 19 ವೈರಸ್​ನಿಂದ ಮೃಪಟ್ಟಿರುವ ಮಾಜಿ ಹಾಕಿ ಆಟಗಾರರಾದ ಎಂಕೆ ಕೌಶಿಕ್ ಮತ್ತು ರವೀಂದರ್​ ಪಾಲ್ ಸಿಂಗ್ ಅವರ ನೊಂದ ಕುಟಂಬಕ್ಕೆ ನೆರವಾಗಲೂ 5 ಲಕ್ಷ ರೂಪಾಯಿಗಳ ನೆರವನ್ನು ಘೋಷಿಸಿರುವುದಾಗಿ ಕ್ರೀಡಾ ಸಚಿವ ಕಿರಣ್​ ರಿಜಿಜು ಗುರುವಾರ ತಿಳಿಸಿದ್ದಾರೆ.

ಕೌಶಿಕ್ ಮತ್ತು ರವೀಂದರ್​ ಪಾಲ್ ಸಿಂಗ್ 1980ರ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದರು. ಅವರು ಇತ್ತೀಚೆಗೆ ಕೋವಿಡ್ 19 ವೈರಸ್​ಗೆ ತುತ್ತಾಗಿ ನಿಧನರಾಗಿದ್ದರು.

ಕೋವಿಡ್​ 19 ನಿಂದ ನಾವು ಇತ್ತೀಚೆಗೆ ಇಬ್ಬರು ಶ್ರೇಷ್ಠ ಹಾಕಿ ಆಟಗಾರನ್ನು ಕಳೆದುಕೊಂಡಿದ್ದೇವೆ. ಭಾರತೀಯ ಕ್ರೀಡಾ ಕ್ಷೇತ್ರ ಎಂಕೆ ಕೌಶಿಕ್ ಮತ್ತು ರವೀಂದರ್ ಪಾಲ್​ ಸಿಂಗ್​ ಜೀ ಅವರ ಕೊಡುಗೆಯನ್ನು ಸದಾ ಸ್ಮರಿಸುತ್ತದೆ ಎಂದು ರಿಜಿಜು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

ಲೆಜೆಂಡರಿ ಕ್ರೀಡಾಪಟುಗಳಿಗೆ ಬೆಂಬಲದ ಸೂಚಕವಾಗಿ ಅವರ ನೊಂದಿರುವ ಕುಟುಂಬಗಳಿಗೆ ನೆರವಾಗಲು ಭಾರತೀಯ ಕ್ರೀಡಾ ಸಚಿವಾಲಯದ ವತಿಯಿಂದ ತಲಾ 5 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇವೆ. ದುಃಖದ ಈ ಸಮಯದಲ್ಲಿ ನಾವು ಅವರ ಜೊತೆ ನಿಲ್ಲುತ್ತೇವೆ ಎಂದು ಬರೆದು ಕೊಂಡಿದ್ದಾರೆ.

ಎರಡು ವಾರಗಳ ಕಾಲ ಲಖನೌದ ಆಸ್ಪತ್ರೆಯಲ್ಲಿದ್ದ 60 ವರ್ಷದ ಸಿಂಗ್ ಮಾರಕ ವೈರಸ್​ಗೆ ಬಲಿಯಾದರೆ, 66 ಕೌಶಿಕ್ ಮೂರು ವಾರಗಳ ಬಳಲಿಕೆಯ ನಂತರ ಇಹಲೋಕ ತ್ಯಜಿಸಿದ್ದರು.

ಇದನ್ನು ಓದಿ:ನಿಮಗೆ ಬೇಕಾದ ಬೆಂಬಲ ಕೊಡ್ತೀವಿ, ಬೇರೆ ದೇಶಗಳ ಪ್ರೋಟೋಕೋಲ್ ಮುರಿಯಬೇಡಿ : ಅಥ್ಲೀಟ್​ಗಳಿಗೆ ರಿಜಿಜು ಎಚ್ಚರಿಕೆ

Last Updated : May 13, 2021, 7:33 PM IST

ABOUT THE AUTHOR

...view details