ಕರ್ನಾಟಕ

karnataka

ETV Bharat / sports

ಹಾಕಿ : ಟೋಕಿಯೋದಲ್ಲಿ ಪದಕ ಗೆಲ್ಲಬಲ್ಲ 5 ತಂಡಗಳಲ್ಲಿ ಭಾರತವೂ ಒಂದು : ಮಾಜಿ ಕೋಚ್ ಓಲ್ಟ್​ಮನ್ಸ್​ - ಹಾಕಿ ಇಂಡಿಯಾ

ಭಾರತ ತಂಡ ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಯಶಸ್ವಿ ತಂಡ ಎನಿಸಿಕೊಂಡಿದೆ, ಒಟ್ಟು 8 ಚಿನ್ನದ ಪದಕ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದಿದೆ. ಆದರೆ, 1980ರ ನಂತರ ಈವರೆಗೆ ಒಂದು ಪದಕ ಗೆಲ್ಲಲಾಗಿಲ್ಲ. ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಪದಕ ಗೆಲ್ಲುವ ನಿರೀಕ್ಷೆ ಇದೆ..

ರೋಲೆಂಟ್​  ಓಲ್ಟ್​ಮನ್ಸ್​
ರೋಲೆಂಟ್​ ಓಲ್ಟ್​ಮನ್ಸ್​

By

Published : Jun 16, 2021, 7:48 PM IST

ನವದೆಹಲಿ :ಜುಲೈ ಮತ್ತು ಆಗಸ್ಟ್​ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಬಲ್ಲ ಅಗ್ರ 5 ಸ್ಪರ್ಧಿಗಳಲ್ಲಿ ಭಾರತವೂ ಒಂದು ಎಂದು ಹಾಕಿ ತಂಡದ ಮಾಜಿ ಕೋಚ್​ ರೋಲೆಂಟ್​ ಓಲ್ಟ್‌ಮನ್ಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಕಿ ಇಂಡಿಯಾದ ಪೋಡ್​ಕಾಸ್ಟ್​ 'ಹಾಕಿ ತೆ ಚರ್ಚಾ' ಕಾರ್ಯಾಕ್ರಮದಲ್ಲಿ ಮಾತನಾಡಿದ ಅವರು, ಟೋಕಿಯೋದಲ್ಲಿ ಯಶಸ್ವಿಯಾಗಲು ಯಾವುದೇ ತಂಡಕ್ಕಾದರೂ ಮಾನಸಿಕ ಕಠೋರತೆ ಪ್ರಮುಖವಾಗುತ್ತದೆ ಎಂದು ಓಲ್ಟ್​ಮನ್ಸ್ ತಿಳಿಸಿದ್ದಾರೆ.

ನನಗೆ, ಟೋಕಿಯೋದಲ್ಲಿ ಪದಕ ಗೆಲ್ಲುವ ಅಗ್ರ 5 ತಂಡಗಳಲ್ಲಿ ಭಾರತವೂ ಒಂದಾಗಿದೆ. ಕಳೆದ 2 ಎರಡು ವರ್ಷಗಳಲ್ಲಿ ಅತ್ಯುತ್ತಮ ತಂಡಗಳ ಜೊತೆಗಿನ ಸ್ಪರ್ಧೆಗಳಲ್ಲಿ ಭಾರತ ತಂಡ ಅದ್ಭುತ ಸ್ಥಿರತೆ ತೋರುತ್ತಿದೆ ಎಂದಿರುವ ಅವರು, ಅನಾವಶ್ಯಕ ಭೀತಿ ಬೇಡ ಎಂದು ಟೀಂ​ ಇಂಡಿಯಾಗೆ ಎಚ್ಚಿರಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್​ ಅಂತಹ ಬಲಿಷ್ಠ ರಾಷ್ಟ್ರಗಳನ್ನೂ ಮಣಿಸುವ ಸಾಮರ್ಥ್ಯವನ್ನು ಕಳೆದ ಎರಡು ವರ್ಷಗಳಿಂದ ತೋರಿಸುತ್ತಿದೆ. ಆದರೂ ಇದನ್ನೇ ಒಲಿಂಪಿಕ್ಸ್‌ನಲ್ಲಿ ಮಾಡುವುದು ವಿಭಿನ್ನ ವಿಷಯ. ಆದರೆ, ಇಂತಹ ಟೂರ್ನಮೆಂಟ್ ಗೆಲ್ಲಲು ಬಯಸಿದಾಗ ಪ್ರತಿ ಪಂದ್ಯವನ್ನು ಗೆಲ್ಲಬೇಕೆಂಬ ಮನೋಭಾವನೆಯಲ್ಲಿ ಆಡುವುದು ನಿರ್ಣಾಯಕ ಅಂಶವಾಗಲಿದೆ ಎಂದು ಓಲ್ಟ್​ಮನ್ಸ್ ಹೇಳಿದ್ದಾರೆ.

ನೀವು ಇಂತಹ ಟೂರ್ನಿಯಲ್ಲಿ ಪಾಲ್ಗೊಳ್ಳುವಾಗ ಪಂದ್ಯಕ್ಕೂ ಮುನ್ನ ಅನಾವಶ್ಯಕ ಭೀತಿ ಅಥವಾ ಮುನ್ನಡೆ ಸಾಧಿಸಿದ ಸಂದರ್ಭದಲ್ಲಿ ಅತಿಯಾದ ಉತ್ಸಾಹಕ್ಕೂ ಒಳಗಾಗಬಾರದೆಂದು ಕಿವಿಮಾತು ಹೇಳಿದ್ದಾರೆ. ಜೊತೆಗೆ ಟೋಕಿಯೋದಲ್ಲಿ ಕ್ರೀಡಾಕೂಟ ನಡೆಯುವುದರಿಂದ ಭಾರತಕ್ಕೆ ಸಿಕ್ಕಿರುವ ಅನುಕೂಲ ಎಂದು ತಿಳಿಸಿದ್ದಾರೆ.

ಭಾರತ ತಂಡ ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಯಶಸ್ವಿ ತಂಡ ಎನಿಸಿಕೊಂಡಿದೆ, ಒಟ್ಟು 8 ಚಿನ್ನದ ಪದಕ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದಿದೆ. ಆದರೆ, 1980ರ ನಂತರ ಈವರೆಗೆ ಒಂದು ಪದಕ ಗೆಲ್ಲಲಾಗಿಲ್ಲ. ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಪದಕ ಗೆಲ್ಲುವ ನಿರೀಕ್ಷೆ ಇದೆ.

ಇದನ್ನು ಓದಿ:ಐಸಿಸಿ ಟೆಸ್ಟ್​ ಶ್ರೇಯಾಂಕ : 4ನೇ ಸ್ಥಾನಕ್ಕೆ ಬಡ್ತಿ ಪಡೆದ ಕೊಹ್ಲಿ, ಅಗ್ರಸ್ಥಾನದಿಂದ ಕೆಳಗಿಳಿದ ವಿಲಿಯಮ್ಸನ್​

ABOUT THE AUTHOR

...view details