ಬೆಂಗಳೂರು: ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ಎಲ್ಲಾ ಆರು ಭಾರತ ತಂಡದ ಹಾಕಿ ಆಟಗಾರರನ್ನು ಬುಧವಾರ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ(SAI) ತಿಳಿಸಿದೆ.
ಸೋಮವಾರ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾಗಿದ್ದರಿಂದ ಸ್ಟ್ರೈಕರ್ ಮಂದೀಪ್ ಸಿಂಗ್ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ನಾಯಕ ಮನ್ಪ್ರೀತ್ ಸಿಂಗ್, ಜಸ್ಕರಣ್ ಸಿಂಗ್ , ಸುರೇಂದ್ರ ಕುಮಾರ್, ಡ್ರ್ಯಾಗ್ ಫ್ಲಿಕ್ಕರ್ ವರುಣ್ ಕುಮಾರ್ ಮತ್ತು ಗೋಲ್ಕೀಪರ್ ಕೃಷ್ಣ ಬಹದ್ದೂರ್ ಪಾಠಕ್ ಅವರನ್ನು ಕೂಡ ಎಸ್ಎಸ್ ಸ್ಪರ್ಷ್ ಮಲ್ಟಿಸ್ಪೆಸಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.