ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಫುಟ್ಬಾಲ್ ಕ್ಯಾಪ್ಟನ್​ ಸುನಿಲ್​ ಚೆಟ್ರಿಗೆ ಕೊರೊನಾ ವೈರಸ್​ - ಕೋವಿಡ್​ ಸೋಂಕಿಗೊಳಗಾದ ಚೆಟ್ರಿ

ಟೀಂ ಇಂಡಿಯಾ ಫುಟ್ಬಾಲ್​ ಕ್ಯಾಪ್ಟನ್ ಸುನಿಲ್​ ಚೆಟ್ರಿಗೆ ಮಹಾಮಾರಿ ಕೊರೊನಾ ವೈರಸ್​ ಸೋಂಕು ತಗುಲಿರುವುದು ಖಚಿತಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದ್ದಾರೆ.

Sunil Chhetri
Sunil Chhetri

By

Published : Mar 11, 2021, 5:31 PM IST

Updated : Mar 11, 2021, 6:13 PM IST

ನವದೆಹಲಿ: ಭಾರತ ಫುಟ್ಬಾಲ್​ ತಂಡದ ಕ್ಯಾಪ್ಟನ್​ ಸುನಿಲ್​ ಚೆಟ್ರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಗೊಂಡಿದೆ.

ಕೋವಿಡ್ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿರುವ ಚೆಟ್ರಿ, ನಾನು ಕೋವಿಡ್​-19 ಸೋಂಕಿಗೊಳಗಾಗಿದ್ದು, ವೈರಸ್​ನಿಂದ ಆದಷ್ಟು ಬೇಗ ಚೇತರಿಸಿಕೊಂಡು ಫುಟ್ಬಾಲ್​ ಪಿಚ್​ಗೆ ಮರಳಲಿದ್ದೇನೆ ಎಂದಿದ್ದಾರೆ.

ಇಂಡಿಯನ್​ ಸೂಪರ್ ಲೀಗ್​ 2020-21ನಲ್ಲಿ ಬೆಂಗಳೂರು ಎಫ್​ಸಿಯ ಕ್ಯಾಪ್ಟನ್​ ಆಗಿರುವ ಚೆಟ್ರಿ, 20 ಗೇಮ್​ಗಳಿಂದ 8 ಗೋಲು ಗಳಿಕೆ ಮಾಡಿದ್ದು, ಅತಿ ಹೆಚ್ಚು ಸ್ಕೋರ್ ಮಾಡಿರುವ 7ನೇ ಪ್ಲೇಯರ್​ ಆಗಿದ್ದಾರೆ.

Last Updated : Mar 11, 2021, 6:13 PM IST

ABOUT THE AUTHOR

...view details