ಲಿಸ್ಬನ್: ಕ್ರಿಶ್ಚಿಯಾನೋ ರೊನಾಲ್ಡೋ ಅಂತಹ ವಿಶ್ವ ಶ್ರೇಷ್ಟ ಆಟಗಾರನನ್ನ ಹೊಂದಿರುವ ಪೊರ್ಚುಗಲ್ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಫ್ರಾನ್ಸ್ ಯುಇಎಫ್ಎ ನೇಷನ್ಸ್ ಲೀಗ್ನಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ.
ಫ್ರಾನ್ಸ್ನ ಮಿಡ್ ಫೀಲ್ಡರ್ ಎನ್ಗೋಲೊ ಕಾಂಟ್ ಫ್ರಾನ್ಸ್ ಪರ ಏಕೈಕ ಗೋಲುಗಳಿಸಿ ಪೋರ್ಚುಗಲ್ನ ನೇಷನ್ಸ್ ಲೀಗ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕೊನೆಗಾಣಿಸಿತು. ಅವರು 54ನೇ ನಿಮಿಷದಲ್ಲಿ ಈ ಗೆಲುವಿನ ಗೋಲು ಸಿಡಿಸಿದ್ದರು.