ಕರ್ನಾಟಕ

karnataka

ETV Bharat / sports

75 ಕೋಟಿ ಬೆಲೆಯ ಕಾರು​ ಖರೀದಿಸಿದ​ ಫುಟ್ಬಾಲ್​ ಸ್ಟಾರ್: ಇವರ ಬಳಿಯಿವೆ 264 ಕೋಟಿ ಬೆಲೆ ಬಾಳುವ ಕಾರುಗಳು! - 75 ಕೋಟಿಯ ಬುಗಾಟಿ ಕಾರ್​ ಖರೀದಿಸಿದ ಕಿಸ್ಟಿಯಾನೋ ರೊನಾಲ್ಡೊ

ಪೋರ್ಚುಗಲ್​ ಫುಟ್ಬಾಲ್​ ಸ್ಟಾರ್​ ಕ್ರಿಸ್ಟಿಯಾನೋ​ ರೊನಾಲ್ಡೊ ಪ್ರಪಂಚದ ಅತ್ಯಂತ ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

cristiano ronaldo buys bugatti, cristiano ronaldo buys bugatti car, cristiano ronaldo buys 75 crores bugatti car, cristiano ronaldo news, ಬುಗಾಟಿ ಕಾರ್​ ಖರೀದಿಸಿದ ಕಿಸ್ಟಿಯಾನೋ ರೊನಾಲ್ಡೊ, 75 ಕೋಟಿಯ ಬುಗಾಟಿ ಕಾರ್​ ಖರೀದಿಸಿದ ಕಿಸ್ಟಿಯಾನೋ ರೊನಾಲ್ಡೊ, ಕಿಸ್ಟಿಯಾನೋ ರೊನಾಲ್ಡೊ ಸುದ್ದಿ,
ಕೃಪೆ: Instagram

By

Published : Aug 4, 2020, 10:51 AM IST

Updated : Aug 4, 2020, 11:01 AM IST

ಲಂಡನ್​:ಖ್ಯಾತ ಫುಟ್ಬಾಲ್​ ಆಟಗಾರ ಕಿಸ್ಟಿಯಾನೋ ರೊನಾಲ್ಡೊ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಕಾರಿನ​ ಬೆಲೆ ಬರೋಬ್ಬರಿ 75 ಕೋಟಿಗೂ ಹೆಚ್ಚು.

ಹೌದು, ಸುಮಾರು 75 ಕೋಟಿಗೂ(75,13,60,000 ರೂ) ಅಧಿಕ ಬೆಲೆ ಬಾಳುವ ಬುಗಾಟಿ ಲಾ ವೊಯಿಚರ್ ನೊಯರ್ ಕಾರನ್ನು ಖ್ಯಾತ್​ ಫುಟ್ಬಾಲ್​ ಆಟಗಾರ ಕಿಸ್ಟಿಯಾನೋ ರೊನಾಲ್ಡೊ ಖರೀದಿಸಿದ್ದಾರೆ. ಇತ್ತೀಚೆಗೆ ಇಟಿಯಲ್ಲಿ ನಡೆದ ಸಿರೀಸ್​ ಎ ಚಾಂಪಿಯನ್‌ಶಿಪ್ ಫುಟ್ಬಾಲ್​ ಪಂದ್ಯದಲ್ಲಿ ಜುವೆಂಟಸ್ ತಂಡ ಗೆಲ್ಲಲು ರೊನಾಲ್ಡೊ ಪ್ರಮುಖ ಪಾತ್ರ ವಹಿಸಿದ್ದರು. ಈ ಖುಷಿ ಹಿನ್ನೆಲೆ 75 (8.5 ಮಿಲಿಯನ್ ಯುರೋ ​) ಕೋಟಿ ರೂ.ನ ಕಾರನ್ನು ಖರೀದಿಸಿ ಸಂಭ್ರಮಿಸಿದ್ದಾರೆ. ಕಾರು ಖರೀದಿಸಿರುವ ಸಂತೋಷವನ್ನು ಸಾಮಾಜಿಕ ಜಾಲತಾಣದ ಮೂಲಕ ಅವರು ವ್ಯಕ್ತಪಡಿಸಿದ್ದಾರೆ.

ಬುಗಾಟಿ ತಯಾರಿಕೆ ಸಂಸ್ಥೆ ಇಂತಹ ಬೆಲೆ ಬಾಳುವ ಕೇವಲ 10 ಕಾರುಗಳನ್ನ ಮಾತ್ರ ಸಿದ್ಧಪಡಿಸಿದೆ. ಪ್ರಸ್ತುತ ರೊನಾಲ್ಡೊ ಗ್ಯಾರೇಜ್​ನಲ್ಲಿರುವ ಕಾರುಗಳ ಒಟ್ಟು ಮೊತ್ತವೇ ಸುಮಾರು 264 ಕೋಟಿಗೂ (30 ಮಿಲಿಯನ್ ಯುರೋ​) ಅಧಿಕವಾಗಿದೆ.

Last Updated : Aug 4, 2020, 11:01 AM IST

ABOUT THE AUTHOR

...view details