ಕರ್ನಾಟಕ

karnataka

ETV Bharat / sports

ಟಿ - 20ಯಲ್ಲಿ ಪಾಕ್​ ವಿರುದ್ಧ 19ರನ್​ಗಳ ಜಯ: ಐತಿಹಾಸಿಕ ಸಾಧನೆ ಬರೆದ ಜಿಂಬಾಬ್ವೆ!

ಪಾಕ್​ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ ಜಿಂಬಾಬ್ವೆ ತಂಡ ಐತಿಹಾಸಿಕ ಸಾಧನೆ ಮಾಡಿದೆ.

Zimbabwe
Zimbabwe

By

Published : Apr 23, 2021, 8:03 PM IST

ಹರಾರೆ: ಜಿಂಬಾಬ್ವೆ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಪಾಕ್​ ಎರಡನೇ ಪಂದ್ಯದಲ್ಲಿ 19ರನ್​ಗಳ ಸೋಲು ಕಂಡಿದೆ. ಈ ಮೂಲಕ ಜಿಂಬಾಬ್ವೆ ತಂಡ ಐತಿಹಾಸಿಕ ಸಾಧನೆ ನಿರ್ಮಿಸಿದೆ.

ಹರಾರೆ ಸ್ಫೋರ್ಟ್ಸ್​ ಕ್ಲಬ್​​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಜಿಂಬಾಬ್ವೆ ತಂಡ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 118ರನ್​​ ದಾಖಲು ಮಾಡಿತು. ತಂಡದ ಪರ ಆರಂಭಿಕ ಅಟಗಾರ ಕಮುಂಕನ್ವೆ 34ರನ್​ಗಳಿಕೆ ಮಾಡಿದರು.

119ರನ್​ಗಳ ಗುರಿ ಬೆನ್ನತ್ತಿದ ಪಾಕ್ ತಂಡ ಆರಂಭಿಕ ಆಘಾತ ಅನುಭವಿಸಿತು. ಮೊಹಮ್ಮದ್​ ರಿಜ್ವಾನ್​​(13)ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಆದರೆ, ಕ್ಯಾಪ್ಟನ್​ ಬಾಬರ್​ ಅಜಮ್​​(41)ರನ್​ಗಳಿಕೆ ಮಾಡಿ ತಂಡವನ್ನ ಗೆಲುವಿನತ್ತ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ರು. ಆದರೆ ಇವರ ವಿಕೆಟ್ ಬೀಳುತ್ತಿದ್ದಂತೆ ಪಾಕ್​ನ ಯಾವೊಬ್ಬ ಪ್ಲೇಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 78ರನ್​ಗಳಿಕೆ ಮಾಡಿದ್ದ ವೇಳೆ ಕೇವಲ 3ವಿಕೆಟ್ ಕಳೆದುಕೊಂಡಿದ್ದ ಪಾಕ್​ 99ರನ್​ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಸೋಲಿಗೆ ಶರಣಾಯಿತು.

ಮಧ್ಯಮ ಕ್ರಮಾಂಕದಲ್ಲಿ ಡ್ಯಾನಿಷ್​ ಅಜೀಜ್​​(24)ರನ್​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಅವರಿಗೆ ಯಾರೊಬ್ಬರು ಸಾಥ್​ ನೀಡಲಿಲ್ಲ. ಹೀಗಾಗಿ ತಂಡ ಕೊನೆಯದಾಗಿ 19.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 99ರನ್​ಗಳಿಕೆ ಮಾಡಿತು. 19ರನ್​ಗಳ ಸೋಲು ಕಂಡಿದೆ. ಜಿಂಬಾಬ್ವೆ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಲ್ಯೂಕ್ ಜೊಂಗ್ವೆ 4ವಿಕೆಟ್ ಪಡೆದು ಮಿಂಚಿದ್ರೆ, ರಿಯಾನ್​ ಬುರ್ಲೆ 2 ವಿಕೆಟ್​ ಹಾಗೂ ಮುಜುರಬನಿ, ರಿಚರ್ಡ್​​ ತಲಾ 1ವಿಕೆಟ್ ಪಡೆದುಕೊಂಡರು.

ಮೊದಲ ಪಂದ್ಯದಲ್ಲಿ ತಿಣಕಾಟ ನಡೆಸಿ ಗೆಲುವು ಸಾಧಿಸಿದ್ದ ಪಾಕ್​ಗೆ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಿರುಗೇಟು ನೀಡಿದೆ. ಹೀಗಾಗಿ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಕೊನೆಯ ಪಂದ್ಯ ರೋಚಕತೆ ಪಡೆದುಕೊಂಡಿದೆ. ಜತೆಗೆ ಪಾಕ್​ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಟಿ-20 ಗೆಲುವು ದಾಖಲೆ ಮಾಡಿರುವ ಸಾಧನೆಗೆ ಜಿಂಬಾಬ್ವೆ ಪಾತ್ರವಾಗಿದೆ.

ABOUT THE AUTHOR

...view details