ಹರಾರೆ: ಆತಿಥೇಯ ಜಿಂಬಾಬ್ವೆ ಎದುರಿನ ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಪ್ರಾಬಲ್ಯ ಮೆರೆದಿದೆ. ಮೊದಲನೇ ಪಂದ್ಯದ ರೀತಿಯಲ್ಲೇ ಆತಿಥೇಯರ ವಿರುದ್ಧ ಸುಲಭ ಜಯ ಸಾಧಿಸಿರುವ ರಾಹುಲ್ ಬಳಗ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ (2-0) ಮಾಡಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ತಂಡ ಕೇವಲ 161ರನ್ಗಳಿಗೆ ಆಲೌಟ್ ಆಯಿತು. ಇದರ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 5 ವಿಕೆಟ್ ಕಳೆದುಕೊಂಡು 167ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ.
ಜಿಂಬಾಬ್ವೆ ಇನ್ನಿಂಗ್ಸ್: ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾರಕ ಬೌಲಿಂಗ್ ಎದುರಿಸುವಲ್ಲಿ ವಿಫಲವಾದ ಜಿಂಬಾಬ್ವೆ 38.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 161ರನ್ಗಳಿಸಿದೆ. ತಂಡದ ಪರ ಸೇನ್ ವಿಲಿಯನ್ಸ್(42) ಹಾಗೂ ಬುರ್ಲೆ(39) ವೈಯಕ್ತಿಕ ಗರಿಷ್ಠ ಸ್ಕೋರ್ರ ಆಗಿದ್ದಾರೆ. ಆರಂಭಿಕರಾದ ಕೈಟಿನೊ(7), ಇನೊಸಿಟ್(16) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲೂ ಮಾದವೀರ್(2), ಚಕುಬಾ(2) ನಿರಾಸೆ ಅನುಭವಿಸಿದರು.
ಅನುಭವಿ ಸಿಕಂದರ್ ರಾಜಾ(16) ತಂಡಕ್ಕೆ ಹೇಳಿಕೊಳ್ಳುವಂತಹ ಕಾಣಿಕೆ ನೀಡಲಿಲ್ಲ. 6ನೇ ವಿಕೆಟ್ಗೆ ಒಂದಾದ ವಿಲಿಯಮ್ಸ್(42) ಹಾಗೂ ಬುರ್ಲೆ(39) ತಂಡವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಜಾಂಗ್ವೆ(6), ಬ್ರಾಂಡ್(9), ತನಕ್(4) ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಸಿರಾಜ್, ಪ್ರಸಿದ್ಧ ಕೃಷ್ಣ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದುಕೊಂಡರು.