ಕರ್ನಾಟಕ

karnataka

ETV Bharat / sports

ಜಹೀರ್ ಖಾನ್ ನನಗೆ ಮಾದರಿ ಮತ್ತು ಸ್ಪೂರ್ತಿ: ಕೊಹ್ಲಿ ಪಡೆಯ ಹೊಸ ಬೌಲರ್ ನಾಗ್ವಾಸ್ವಾಲಾ - England vs India test series

2019-20 ರಣಜಿ ಆವೃತ್ತಿಯಲ್ಲಿ ಗುಜರಾತ್ ತಂಡದ ಗರಿಷ್ಠ(48) ವಿಕೆಟ್​ ಪಡೆದಿರುವ ಎಡಗೈ ವೇಗಿ ಮುಂಬರುವ ಪ್ರವಾಸದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಬೌಲಿಂಗ್ ಕೋಚ್​ ಭರತ್ ಅರುಣ್​ ಅವರಿಂದ ಕೆಲವು ತಂತ್ರಗಳನ್ನು ಕಲಿಯಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

Arzan Nagwaswalla
ಅರ್ಜಾನ್ ನಾಗ್ವಾಸ್ವಾಲಾ

By

Published : May 10, 2021, 10:10 PM IST

ಮುಂಬೈ: ಮುಂಬರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಆಯ್ಕೆಯಾಗಿರುವ ಗುಜರಾತ್​​ನ 23 ವರ್ಷದ ವೇಗಿ ಅರ್ಜಾನ್ ನಾಗ್ವಾಸ್ವಾಲಾ ತಮಗೆ ಲೆಜೆಂಡರಿ ವೇಗಿ ಜಹೀರ್ ಖಾನ್ ಮಾದರಿ ಮತ್ತ ಸ್ಪೂರ್ತಿ ಎಂದು ತಿಳಿಸಿದ್ದಾರೆ.

2019-20 ರಣಜಿ ಆವೃತ್ತಿಯಲ್ಲಿ ಗುಜರಾತ್ ತಂಡದ ಗರಿಷ್ಠ(48) ವಿಕೆಟ್​ ಪಡೆದಿರುವ ಎಡಗೈ ವೇಗಿ ಮುಂಬರುವ ಪ್ರವಾಸದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಬೌಲಿಂಗ್ ಕೋಚ್​ ಭರತ್ ಅರುಣ್​ ಅವರಿಂದ ಕೆಲವು ತಂತ್ರಗಳನ್ನು ಕಲಿಯಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

" ಜಹೀರ್ ಖಾನ್​ ಅವರು ನನಗೆ ಬೌಲಿಂಗ್ ಮಾದರಿ ಮತ್ತು ಸ್ಪೂರ್ತಿಯಾಗಿದ್ದಾರೆ. ಏಕೆಂದರೆ ಅವರೂ ಕೂಡ ಎಡಗೈ ವೇಗದ ಬೌಲರ್ ಆಗಿದ್ದಾರೆ. ನಾನು ಅವರು ಭಾರತದ ಪರ ಆಡುವಾಗ ಮತ್ತು ತಂಡಕ್ಕೆ ಅತ್ಯುತ್ತಮವಾದದನ್ನು ನೋಡುತ್ತಲೇ ಬೆಳೆದಿದ್ದೇನೆ ಎಂದು ನಾಗ್ವಾಸ್ವಾಲಾ ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನೂ ಬುಮ್ರಾ ಗುಜರಾತ್​ನವರೇ ಆದರೂ ಅವರ ಜೊತೆ ದೇಶಿ ಕ್ರಿಕೆಟ್​ ಆಡಿಲ್ಲ. ಏಕೆಂದರೆ ಅವರು ಭಾರತ ತಂಡಕ್ಕಾಗಿ ಆಡುತ್ತಿರುತ್ತಾರೆ. ಆದರೆ, ಮುಂಬೈ ಇಂಡಿಯನ್ಸ್​ನಲ್ಲಿ ಅಭ್ಯಾಸ ಮಾಡುವಾಗ ಅವರು ಕೋಚ್​ಗಳಾದ ಜಹೀರ್ ಭಾಯ್ ಆಥವಾ ಶೇನ್ ಬಾಂಡ್​ ಅಥವಾ ಯಾರಿಂದಲಾದರೂ ಎಷ್ಟು ಸಾಧ್ಯವೋ ಅಷ್ಟನ್ನು ಕಲಿಯಲು ಪ್ರಯತ್ನಿಸು ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ಅಲ್ಲದೇ ನೀನು ಏನು ಮಾಡಬೇಕೆಂದು ನಿರ್ಧರಿಸುವ ಜವಾಬ್ದಾರಿ ನಿನ್ನದೇ ಎಂದು ಅವರು ನನಗೆ ಹೇಳುತ್ತಿರುತ್ತಾರೆ ಎಂದು ನಾಗ್ವಾಸ್ವಾಲಾ ಹೇಳಿದ್ದಾರೆ.

ಭಾರತ ತಂಡಕ್ಕೆ ಆಯ್ಕೇಯಾದಾಗ ನಿಮ್ಮಲ್ಲಿ ಉಂಟಾದ ಭಾವನೆ ಹೇಗಿತ್ತು ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, " ಪ್ರತಿಯೊಬ್ಬರು ತುಂಬಾ ಖುಷಿಪಟ್ಟರು ಮತ್ತು ಈ ಸುದ್ದಿ ತಿಳಿದಾಗ ಅವರೆಲ್ಲರೂ ಮಾತು ಬಾರದಂತವರಾಗಿದ್ದರು. ನಾನು ನನ್ನ ಮನೆಗೆ ಹಿಂತಿರುಗುತ್ತಿರುವಾಗ ಕರೆ ಸ್ವೀಕರಿಸಿದೆ. ನಂತರ ಮನೆಗೆ ಕರೆ ಮಾಡಿ ಈ ಸುದ್ದಿಯನ್ನು ನನ್ನ ಪೋಷಕರ ಜೊತೆ ಹಂಚಿಕೊಂಡೆ. ನಾನು ಮನೆಗೆ ತಲುಪುತ್ತಿದ್ದಂತೆ ಅಲ್ಲಿ ನನ್ನ ಸ್ನೇಹಿತರು ನೆರೆದಿದ್ದರು, ನಾವು ಕೇಕ್ ಕಟ್ ಮಾಡಿದೆವು.

10ರಿಂದ 15 ಸೆಕೆಂಡ್​ ನನ್ನ ಪಯಣ ಕಣ್ಣಮುಂದೆ ಬಂದು ಹೋಯಿತು. ನಾನು ಕ್ರಿಕೆಟ್ ಪ್ರಾರಂಭಿಸಿದಾಗ, ನನ್ನಲ್ಲಿ ಏನಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ವಲ್ಸಾದ್‌(ಆಕಾಡೆಮಿ)ಗೆ ಆಯ್ಕೆಯಾದರೆ ನಾನು ಎಲ್ಲಿಗೆ ಹೋಗುತ್ತೇನೆ ಮತ್ತು ಮುಂದೆ ಆಡುತ್ತೇನೆ ಎಂದು ನನಗೆ ತಿಳಿದಿರಲಿಲ್ಲ ಎಂದು ಭಾರತ ತಂಡಕ್ಕೆ ಹೆಚ್ಚುವರಿ ಬೌಲರ್ ಆಗಿ ಆಯ್ಕೆಯಾಗಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ವೇಳಾಪಟ್ಟಿ ಪ್ರಕಟ

ABOUT THE AUTHOR

...view details