ಕರ್ನಾಟಕ

karnataka

ETV Bharat / sports

ಮಹಿಳೆಯರ ಏಕದಿನ ರ್‍ಯಾಂಕಿಂಗ್: ಲ್ಯಾನಿಂಗ್​​ಗೆ 2ನೇ ಸ್ಥಾನ, ಮಿಥಾಲಿ-ಮಂಧಾನ ಕುಸಿತ

ವಿಶ್ವಕಪ್​ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದೆದುರು 9 ರನ್​ಗಳಿಗೆ ವಿಕೆಟ್‌ ಒಪ್ಪಿಸಿ ನೀರಸ ಪ್ರದರ್ಶನ ತೋರಿದ ಮಿಥಾಲಿ ರಾಜ್ ಶ್ರೇಯಾಂಕ ಪಟ್ಟಿಯಲ್ಲಿ​ 2 ರಿಂದ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ಪಂದ್ಯದಲ್ಲಿ 52 ರನ್​ಗಳಿಸಿದ ಹೊರತಾಗಿಯೂ ಸ್ಮೃತಿ ಮಂಧಾನ 8ರಿಂದ 10ನೇ ಸ್ಥಾನಕ್ಕಿಳಿದರು.

Women's ODI batters rankings
ಮಿಥಾಲಿ ರಾಜ್ , ಸ್ಮೃತಿ ಮಂಧಾನ

By

Published : Mar 8, 2022, 7:14 PM IST

ದುಬೈ: ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್​ ಮತ್ತು ಆರಂಭಿಕ ಬ್ಯಾಟರ್​ ಸ್ಮೃತಿ ಮಂಧಾನ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್​​ನಲ್ಲಿ 2 ಸ್ಥಾನಗಳ ಹಿನ್ನಡೆ ಅನುಭವಿಸಿದ್ದಾರೆ.

ಮಂಗಳವಾರ ಏಕದಿನ ಶ್ರೇಯಾಂಕ ಬಿಡುಗಡೆಯಾಗಿದೆ. ವಿಶ್ವಕಪ್​ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 86 ರನ್​ಗಳಿಸಿ ಮಿಂಚಿದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಅದೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಬ್ಯಾಟರ್ ರಚೇಲ್ ಹೇನ್ಸ್​ 6 ಸ್ಥಾನ ಏರಿಕೆ ಕಂಡು ಅಗ್ರ(7) 10ಕ್ಕೆ ಪ್ರವೇಶ ಪಡೆದಿದ್ದಾರೆ. ಈ ಪಂದ್ಯದಲ್ಲಿ ಶತಕ ಸಿಡಿಸಿದ್ದ ಇಂಗ್ಲೆಂಡ್ ಆಲ್​ರೌಂಡರ್ ನ್ಯಾಟ್ ಸೀವರ್​ 5ಸ್ಥಾನ ಮೇಲೇರಿ 6ರಲ್ಲಿದ್ದಾರೆ.

ಮಂಧಾನ-ಮಿಥಾಲಿ ಕುಸಿತ:ವಿಶ್ವಕಪ್​ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ಎದುರು 9 ರನ್​ಗಳಿಗೆ ವಿಕೆಟ್‌ ಒಪ್ಪಿಸಿ ನೀರಸ ಪ್ರದರ್ಶನ ತೋರಿದ ಮಿಥಾಲಿ ರಾಜ್​ 2 ರಿಂದ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು 52 ರನ್​ಗಳಿಸಿದ ಹೊರತಾಗಿಯೂ ಸ್ಮೃತಿ ಮಂಧಾನ 8ರಿಂದ 10ನೇ ಸ್ಥಾನಕ್ಕಿಳಿದಿದ್ದಾರೆ.

ಬೌಲರ್​ಗಳ ವಿಭಾಗದಲ್ಲಿ ಭಾರತದ ಜೂಲನ್ ಗೋಸ್ವಾಮಿ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ದೀಪ್ತಿ ಶರ್ಮಾ ಆಲ್​ರೌಂಡರ್​ ವಿಭಾಗದಲ್ಲಿ ಒಂದು ಸ್ಥಾನ ಕುಸಿದು 6ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್​ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಜೆಸ್​ ಜೊನಾಸೆನ್​ ಮತ್ತು ಇಂಗ್ಲೆಂಡ್​ನ ಸೋಫಿ ಎಕ್ಲೆಸ್ಟೋನ್​ ಅಗ್ರ 2 ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಟೆಸ್ಟ್​ ಆಡುವ ಆಸೆ ಮುಗಿದಿದೆ, ದೇಶಿ ಕ್ರಿಕೆಟ್​ನಲ್ಲಿ ಯುವಕರ ಸ್ಥಾನ ಆಕ್ರಮಿಸಲಾರೆ: ನಿವೃತ್ತಿ ಸುಳಿವು ಕೊಟ್ಟ ಫಿಂಚ್‌

ABOUT THE AUTHOR

...view details