ಆಕ್ಲೆಂಡ್:ಹರ್ಮನ್ಪ್ರೀತ್ ಕೌರ್, ಯಸ್ತಿಕಾ ಭಾಟಿಯಾ ಮತ್ತು ಮಿಥಾಲಿ ರಾಜ್ ಅರ್ಧಶತಗಳ ನೆರವಿನಿಂದ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ 278 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಆರಂಭಿಕರಾದ ಸ್ಮೃತಿ ಮಂಧಾನ(10) ಮತ್ತು ಶೆಫಾಲಿ ವರ್ಮಾ(12) ವೈಫಲ್ಯ ಅನುಭವಿಸಿತ್ತು. ಆದರೆ ಅನುಭವಿ ಮಿಥಾಲಿ ರಾಜ್ ಮತ್ತು ಯುವ ಬ್ಯಾಟರ್ ಯಸ್ತಿಕಾ 3ನೇ ವಿಕೆಟ್ಗೆ 130 ರನ್ಗಳ ಜೊತೆಯಾಟ ನೀಡಿ ಚೇತರಿಕೆ ತಂದುಕೊಟ್ಟರು.
ಭಾಟಿಯಾ 83 ಎಸೆತಗಲ್ಲಿ 6 ಬೌಂಡರಿ ಸಹಿತ 59 ರನ್ಗಳಿಸಿದರೆ, ಮಿಥಾಲಿ ರಾಜ್ 96 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 68 ರನ್ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಹರ್ಮನ್ಪ್ರೀತ್ ಕೌರ್ 47 ಎಸೆತಗಳಲ್ಲಿ 6 ಬೌಂಡರಿ ಸಹಿತ 57 ಮತ್ತು ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 34 ರನ್ಗಳಿಸಿದರು. ಈ ಜೋಡಿ 47 ಎಸೆತಗಳಲ್ಲಿ 64 ರನ್ ಸೇರಿಸಿ ತಂಡದ ಮೊತ್ತವನ್ನು 250 ಗಡಿ ದಾಟಿಸಿದರು.