ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧ ಬುಧವಾರದಿಂದ ಆರಂಭವಾಗಲಿರುವ ಟಿ-20 ಸರಣಿಯಿಂದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೊರಬಿದ್ದಾರೆ. ಇವರ ಬದಲಿಗೆ ಕುಲ್ದೀಪ್ ಯಾದವ್ರನ್ನು ಟಿ20 ತಂಡಕ್ಕೆ ಸೇರ್ಪಡೆಗೊಳಿಸಿದೆ.
ಗಾಯದಿಂದ ಚೇತರಿಸಿಕೊಂಡು ಸುದೀರ್ಘ ವಿರಾಮದ ನಂತರ ಸುಂದರ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ದರು. ಆದರೆ, ಕೊನೆಯ ಏಕದಿನ ಪಂದ್ಯದ ವೇಳೆ ಎಡ ಮಂಡಿಜ್ಜು ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಮತ್ತೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
ಸೀನಿಯರ್ ಆಯ್ಕೆ ಸಮಿತಿ ಸುಂದರ್ ಜಾಗಕ್ಕೆ ಇತ್ತೀಚಿಗಷ್ಟೇ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಕುಲ್ದೀಪ್ ಯಾದವ್ರನ್ನು ಟಿ20 ತಂಡಕ್ಕೆ ಸೇರಿಸಿದೆ. ಕುಲ್ದೀಪ್ ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಆಡಿ 2 ವಿಕೆಟ್ ಪಡೆದಿದ್ದರು. ಫೆಬ್ರವರಿ 16, 18 ಮತ್ತು 20 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ - 20 ಸರಣಿ ನಡೆಯಲಿದೆ.
ಭಾರತದ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ಉಪನಾಯಕ) (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್
ಇದನ್ನೂ ಓದಿ:ಗುಡಿಸಿಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್!