ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಯಲ್ ಚಾಲೆಂಜರ್ಸ್ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ, ಕೆಲಸದ ಹೊರೆಯನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಆ ನಿರ್ಧಾರ ತೆಗೆದುಕೊಂಡೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಹೇಳಿಕೊಂಡಿದ್ದಾರೆ. ಟಿ-20 ವಿಶ್ವಕಪ್ ನಾಯಕನಾಗಿ ನನ್ನ ಕೊನೆಯ ಟೂರ್ನಮೆಂಟ್ ಎಂದಿದ್ದ ಕೊಹ್ಲಿ ನಂತರ ಐಪಿಎಲ್ನಲ್ಲೂ ನಾಯಕನಾಗಿ ಇದೇ ತಮ್ಮ ಕೊನೆಯ ಆವೃತ್ತಿ ಎಂದು ಘೋಷಿಸಿ ಕ್ರಿಕೆಟ್ ವಲಯಕ್ಕೆ ಆಶ್ಚರ್ಯವನ್ನುಂಟು ಮಾಡಿದ್ದರು. ನಂತರ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿತ್ತು. ಇದಾದ ಕೆಲವೇ ತಿಂಗಳಲ್ಲಿ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು.
ಇದನ್ನೂ ಓದಿ:IPL 2022: ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ಪಂಜಾಬ್ ಕಿಂಗ್ಸ್ ನಾಯಕನ ಪಟ್ಟ?
ನನ್ನ ಕೈಯಿಂದ ಮಾಡಲಾಗದನ್ನು ನ್ನನ್ನಲ್ಲೇ ಹಿಡಿದಿಟ್ಟುಕೊಳ್ಳಬೇಕು ಎಂದು ಬಯಸುವ ವ್ಯಕ್ತಿ ನಾನಲ್ಲ. ನಾನು ಸಾಕಷ್ಟನ್ನು ಮಾಡಬಲ್ಲೇ ಎಂದು ನನಗೆ ಗೊತ್ತಿದ್ದರೂ ಸಹಾ, ಆ ಪ್ರಕ್ರಿಯೆಯನ್ನು ಆನಂದಿಸಲು ಆಗದಿದ್ದರೆ, ಅಂತಹವುಗಳನ್ನು ನಾನು ಮಾಡಲು ಹೋಗುವುದಿಲ್ಲ ಎಂದು ಆಧುನಿಕ ಕ್ರಿಕೆಟ್ನ ಶ್ರೇಷ್ಠ ಕ್ರಿಕೆಟಿಗ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದರ ಬಗ್ಗೆ ಆರ್ಸಿಬಿ ಪೋಡ್ಕಾಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.